AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon 2022: ಉತ್ತರ ಭಾರತದಲ್ಲಿ ಭಾರೀ ಪ್ರವಾಹ; ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಲ್ಲಿ ಮರಣ ಮೃದಂಗ

Monsoon 2022: ಉತ್ತರ ಭಾರತದಲ್ಲಿ ಭಾರೀ ಪ್ರವಾಹ; ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಲ್ಲಿ ಮರಣ ಮೃದಂಗ

TV9 Web
| Updated By: ಸುಷ್ಮಾ ಚಕ್ರೆ|

Updated on:Jul 12, 2022 | 1:24 PM

Share

ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಭಾರತದ ರಾಜ್ಯಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ದೆಹಲಿಯಲ್ಲಿ ವರುಣನ ಅಬ್ಬರಕ್ಕೆ ಪ್ರವಾಹ ಉಂಟಾಗಿ, ಹಲವೆಡೆ ಮನೆಗಳು, ದೇವಸ್ಥಾನಗಳು, ಮಸೀದಿಗಳು ಮುಳುಗಿವೆ.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ (Karnataka Rain), ಕೇರಳ, ತೆಲಂಗಾಣದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರ ಜೊತೆಗೆ ಉತ್ತರ ಭಾರತದ ಮಹಾರಾಷ್ಟ್ರ (Maharashtra Rains), ದೆಹಲಿ (Delhi Rain), ಮಧ್ಯಪ್ರದೇಶ, ಉತ್ತರಾಖಂಡ ಕೂಡ ಮಹಾಮಳೆಗೆ ತತ್ತರಿಸಿಹೋಗಿದೆ. ಮಧ್ಯಪ್ರದೇಶದ ಭೂಪಾಲ್, ಗುಜರಾತ್​, ಇಂದೋರ್ ಸೇರಿದಂತೆ 33 ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಮಹಾರಾಷ್ಟ್ರದ 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ (Red Alert) ಘೋಷಿಸಲಾಗಿದೆ. ದೆಹಲಿಯಲ್ಲಿ ಕೂಡ ಇಂದು ಆರೆಂಜ್ ಅಲರ್ಟ್ (Orange Alert)​ ಘೋಷಿಸಲಾಗಿದೆ. ಗುಜರಾತ್​ನಲ್ಲಿ ಪ್ರವಾಹದಿಂದ 7 ಮಂದಿ ಸಾವನ್ನಪ್ಪಿದ್ದಾರೆ.

Published on: Jul 12, 2022 01:22 PM