ಗಡಿಭಾಗದಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ, ತಕ್ಕ ಉತ್ತರ ನೀಡಿದ ಯುದ್ಧ ಸನ್ನದ್ಧ ಭಾರತೀಯ ಸೇನೆ!
ಭಾರತದ ಯುದ್ಧ ವಿಮಾನಗಳಾದ ರಫೇಲ್ ಮತ್ತು ಸುಖೋಯ್ ಸಮರಾಭ್ಯಾಸವನ್ನು ಅರಂಭಿಸಿವೆ ಮತ್ತು ವಿಕ್ರಾಂತ್ ಯುದ್ಧನೌಕೆಯನ್ನು ಯುದ್ಧಕ್ಕೆ ಅಣಿಗೊಳಿಸಲಾಗಿದೆ. ಏತನ್ಮಧ್ಯೆ, ಪಹಲ್ಗಾಮ್ ನಲ್ಲಿ ಭಯೋತ್ಪಾದಕರಿಗೆ ನೆರವಾದವರನ್ನು ಹೊರಗೆಳೆದು ಅವರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಫೋನ್ ಮಾಡಿ, ಅವರ ರಾಜ್ಯಗಳಲ್ಲಿ ತಂಗಿರುವ ಪಾಕಿಸ್ತಾನೀಯರ ಬಳಿ ಯಾವುದೇ ವೀಸಾವಿದ್ದರೂ ದೇಶದಿಂದ ಹೊರದಬ್ಬುವಂತೆ ಸೂಚಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 26: ಭಾರತದೊಂದಿಗಿನ ಗಡಿ ಭಾಗದಲ್ಲಿ ಅಪ್ರಚೋದಿತ ಗುಂಡಿನ ದಾಳಿ (unprovoked firing) ನಡೆಸುವ ಮೂಲಕ ಹತಾಷ ಪಾಕಿಸ್ತಾನ ತನ್ನ ಹಳೇ ಚಾಳಿಗೆ ವಾಪಸ್ಸಾಗಿದೆ. ಭಾರತವೂ ಸೇರಿದಂತೆ ಬೇರೆ ರಾಷ್ಟ್ರಗಳ ಸಹಾಯದಿಂದ ಬದುಕುತ್ತಿರುವ ಪಾಕಿಸ್ತಾನಕ್ಕೆ ಭಾರತದ ಜೊತೆ ಯುದ್ಧ ಮಾಡಲಾಗದು. ಆ ರಾಷ್ಟ್ರವನ್ನು ಕೆಲವೇ ದಿನಗಳಲ್ಲಿ ಮಣ್ಣುಮುಕ್ಕಿಸುವ ಮಿಲಿಟಿರಿ ಸಾಮರ್ಥ್ಯ ಭಾರತಕ್ಕಿದೆ. ಇದನ್ನು ಚೆನ್ನಾಗಿ ಅರಿತಿರುವ ಪಾಕಿಸ್ತಾನ ಗಡಿ ಭಾಗದಲ್ಲಿ ಗುಂಡು ಹಾರಿಸಿ ತನ್ನ ಅಸಹಾಯಕ ಮನಸ್ಥಿತಿಯನ್ನು ಪ್ರದರ್ಶಿಶುತ್ತದೆ. ನಿನ್ನೆ ಅದು ನಡೆಸಿದ ಗುಂಡಿನ ದಾಳಿಗೆ ಭಾರತ ತಕ್ಕ ಉತ್ತರ ನೀಡಿದೆ ಮತ್ತು ಗಡಿಯುದ್ಧಕ್ಕೂ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ.
ಇದನ್ನೂ ಓದಿ: ಸ್ನಾನಕ್ಕೂ ಭಾರತದಿಂದ ನೀರು ಕೇಳಬೇಕು; ತಮಗೆ ತಾವೇ ಟ್ರೋಲ್ ಮಾಡಿಕೊಂಡ ಪಾಕಿಸ್ತಾನೀಯರು!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 26, 2025 12:24 PM