AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಎಸೆತಗಳಲ್ಲಿ ಮುಗಿದ ಸೂಪರ್ ಓವರ್ ಪಂದ್ಯ

5 ಎಸೆತಗಳಲ್ಲಿ ಮುಗಿದ ಸೂಪರ್ ಓವರ್ ಪಂದ್ಯ

ಝಾಹಿರ್ ಯೂಸುಫ್
|

Updated on: Sep 01, 2025 | 11:01 AM

Share

UP T20 League 2025: ಈ ಗುರಿಯನ್ನು ಬೆನ್ನತ್ತಿದ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡಕ್ಕೆ ಕೊನೆಯ ಓವರ್​ನಲ್ಲಿ 11 ರನ್​ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್​ನಲ್ಲಿ ಕೇವಲ 10 ರನ್ ನೀಡಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸುವಲ್ಲಿ ಪ್ರಿನ್ಸ್ ಯಾದವ್ ಯಶಸ್ವಿಯಾದರು. ಅದರಂತೆ ಫಲಿತಾಂಶ ನಿರ್ಣಾಯಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು.

ಉತ್ತರ ಪ್ರದೇಶ್ ಟಿ20 ಲೀಗ್​ ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಲೀಗ್​ನ 28ನೇ ಪಂದ್ಯದಲ್ಲಿ ಗೌರ್ ಗೋರಖಪುರ್ ಲಯನ್ಸ್ ಮತ್ತು ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡಗಳೂ ಮುಖಾಮುಖಿಯಾಗಿದ್ದವು. ಮಳೆಯ ಕಾರಣ 15 ಓವರ್​ಗಳಿಗೆ ಸೀಮಿತವಾಗಿದ್ದ ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಗೌರ್ ಗೋರಖಪುರ್ ಲಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 141 ರನ್​ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡಕ್ಕೆ ಕೊನೆಯ ಓವರ್​ನಲ್ಲಿ 11 ರನ್​ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್​ನಲ್ಲಿ ಕೇವಲ 10 ರನ್ ನೀಡಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸುವಲ್ಲಿ ಪ್ರಿನ್ಸ್ ಯಾದವ್ ಯಶಸ್ವಿಯಾದರು. ಅದರಂತೆ ಫಲಿತಾಂಶ ನಿರ್ಣಾಯಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು.

ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡದ ಪರ ಕಣಕ್ಕಿಳಿದ ಸಮೀರ್ ರಿಝ್ವಿ (0) ಮೊದಲ ಎಸೆತದಲ್ಲೇ ಔಟಾದರು. ಆ ಬಳಿಕ ಬಂದ ಅಭಿಷೇಕ್ ಪಾಂಡೆ 1 ರನ್ ಓಡಿದರು. ಇನ್ನು ಮೂರನೇ ಎಸೆತದಲ್ಲಿ ಆದರ್ಶ್ ಸಿಂಗ್ (0) ಕ್ಯಾಚ್ ನೀಡಿದರು. ಇದರೊಂದಿಗೆ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡದ ಸೂಪರ್ ಓವರ್​ 1 ರನ್​ನೊಂದಿಗೆ ಅಂತ್ಯಗೊಂಡಿತು.

ಸೂಪರ್ ಓವರ್​ನಲ್ಲಿ 2 ರನ್​ಗಳ ಗುರಿ ಪಡೆದ ಗೌರ್ ಗೋರಖಪುರ್ ಲಯನ್ಸ್ ಪರ ವಿನೀತ್ ಪನ್ವಾರ್ 2ನೇ ಎಸೆತದಲ್ಲಿ ಫೋರ್​ ಬಾರಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.