ಚಿಕ್ಕಣ್ಣ ಮದುವೆ: ‘ಉಪಾಧ್ಯಕ್ಷ’ ಸಿನಿಮಾ ನಟಿ ಮಲೈಕಾಗೆ ಸಖತ್ ಖುಷಿ
‘ಉಪಾಧ್ಯಕ್ಷ’ ಚಿತ್ರದಲ್ಲಿ ನಟಿ ಮಲೈಕಾ ವಸುಪಾಲ್ ಅವರು ಚಿಕ್ಕಣ್ಣ ಜೊತೆ ನಟಿಸಿದ್ದರು. ಈಗ ಅವರು ‘ಕಲ್ಟ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈವರೆಗಿನ ಸಿನಿಮಾ ಜರ್ನಿ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಚಿಕ್ಕಣ್ಣನ ಮದುವೆ ಬಗ್ಗೆಯೂ ಪ್ರಸ್ತಾಪ ಆಯಿತು. ವಿಡಿಯೋ ನೋಡಿ..
‘ಉಪಾಧ್ಯಕ್ಷ’ (Upadhyaksha Movie) ಸಿನಿಮಾದಲ್ಲಿ ನಟಿ ಮಲೈಕಾ ವಸುಪಾಲ್ ಅವರು ಚಿಕ್ಕಣ್ಣ ಜೊತೆ ಅಭಿನಯಿಸಿದ್ದರು. ಈಗ ಅವರು ‘ಕಲ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಅನುಭವಗಳ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ಚಿಕ್ಕಣ್ಣನ ಮದುವೆ (Chikkanna Marriage) ಬಗ್ಗೆಯೂ ಪ್ರಸ್ತಾಪ ಆಯಿತು. ‘ಚಿಕ್ಕಣ್ಣ ಮದುವೆ ಆಗುತ್ತಿರುವುದು ತಿಳಿದು ನನಗೆ ತುಂಬ ಖುಷಿ ಆಯಿತು. ನಮ್ಮೆಲ್ಲರಿಗಿಂತ ಮುಂಚೆ ಚಿತ್ರರಂಗಕ್ಕೆ ಬಂದವರು ಅವರು. ಈಗ ಮದುವೆ ಆಗುತ್ತಿದ್ದಾರೆ. ಉಪಾಧ್ಯಕ್ಷ ಆಗುತ್ತಿದ್ದಂತೆಯೇ ಮದುವೆ ಆಗುವುದಾಗಿ ಅವರು ಹೇಳುತ್ತಿದ್ದರು. ಅವರಿಗೆ ಅಭಿನಂದನೆಗಳು’ ಎಂದು ಮಲೈಕಾ ವಸುಪಾಲ್ (Malaika Vasupal) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
