ಕಾಶಿನಾಥ್​ಗೆ ಆ್ಯಸಿಡ್ ಹಾಕಲು ಬಂದಿದ್ದರು: ಭಯಾನಕ ಘಟನೆ ನೆನೆದ ಉಪೇಂದ್ರ

Updated on: Feb 21, 2025 | 10:56 PM

ಕಾಶಿನಾಥ್ ಪುತ್ರ ಅಭಿಮನ್ಯು ನಟನೆಯ ‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾದ ಟ್ರೇಲರ್​ ಲಾಂಚ್​ ವೇಳೆ ಉಪೇಂದ್ರ ಅವರು ನೆನಪಿನ ಪುಟ ತೆರೆದಿದ್ದಾರೆ. ಕಾಶಿನಾಥ್ ವ್ಯಕ್ತಿತ್ವ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಒಮ್ಮೆ ಕಾಶಿನಾಥ್ ಮೇಲೆ ಆ್ಯಸಿಡ್ ಹಾಕುವ ಪ್ರಯತ್ನ ನಡೆದಿತ್ತು ಎಂದು ಉಪೇಂದ್ರ ಅವರು ಹೇಳಿದ್ದಾರೆ.

ಉಪೇಂದ್ರ ಅವರು ಕಾಶಿನಾಥ್ ಗರಡಿಯಲ್ಲಿ ಬೆಳೆದವರು. ಕಾಶಿನಾಥ್ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗ ನಡೆದ ಒಂದು ಘಟನೆಯನ್ನು ಉಪೇಂದ್ರ ಈಗ ನೆನಪಿಸಿಕೊಂಡಿದ್ದಾರೆ. ‘ನಾನು ಕಾಶಿನಾಥ್ ಅವರ ಜೊತೆ ಕುಳಿತಿದ್ದಾಗ ಒಬ್ಬ ಬಂದು ಹಣಕ್ಕೆ ಬೇಡಿಕೆ ಇಟ್ಟ. ಹಣ ಕೊಡದಿದ್ದರೆ ಆ್ಯಸಿಡ್ ಹಾಕುವುದಾಗಿ ಬೆದರಿಸಿದ. ಮರು ದಿನ ಕೂಡ ಆ ವ್ಯಕ್ತಿ ಆ್ಯಸಿಡ್ ಬಾಟಲ್ ಹಿಡಿದುಕೊಂಡು ಬಂದ. ಆಗ ಕಾಶಿನಾಥ್ ಸ್ವಲ್ಪವೂ ಹೆದರದೇ ಒಬ್ಬರೇ ಇದ್ದರು. ಅವರ ಮುಖ ನೋಡಿ ಆತ ವಾಪಸ್ ಹೋದ. ಅದು ಕಾಶಿನಾಥ್ ಅವರ ಹೀರೋಯಿಸಂ’ ಎಂದು ಉಪೇಂದ್ರ ಹೇಳಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More