ಅಪ್ಪ ಇದ್ದಿದ್ರೆ ಹೆಮ್ಮೆ ಪಡುತ್ತಿದ್ರು: ಕಾಶಿನಾಥ್ ಮಗನ ಸಿನಿಮಾ ನೋಡಿ ಹೊಗಳಿದ ಉಪೇಂದ್ರ
‘ಮೊದಲ ಬಾರಿ ಹೃದಯತುಂಬಿ, ಪ್ರಮಾಣಿಕವಾಗಿ ಹೇಳುತ್ತಿದ್ದೇನೆ. ಇಂಥ ಒಂದು ಟೀಮ್ ಜೊತೆ ನಿಂತುಕೊಳ್ಳಲು ಹೆಮ್ಮೆ ಎನಿಸುತ್ತಿದೆ’ ಎಂದು ಉಪೇಂದ್ರ ಅವರು ಹೇಳಿದ್ದಾರೆ. ‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಈ ಸಿನಿಮಾಗೆ ಹೀರೋ ಆಗಿದ್ದಾರೆ.
‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಕಾಶಿನಾಥ್ ಪುತ್ರ ಅಭಿಮನ್ಯು ನಟಿಸಿದ್ದಾರೆ. ಅವರಿಗೆ ನಟಿ ಅಪೂರ್ವಾ ಜೋಡಿ ಆಗಿದ್ದಾರೆ. ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಮಾತನಾಡಿದ್ದಾರೆ. ಈಗಾಗಲೇ ಸಿನಿಮಾ ನೋಡಿ ಉಪೇಂದ್ರ ಮೆಚ್ಚಿಕೊಂಡಿದ್ದಾರೆ. ‘ನಿಮ್ಮ ಅಪ್ಪ ಇರಬೇಕಾಗಿತ್ತು. ಇದನ್ನು ಅವರು ನೋಡಬೇಕಾಗಿತ್ತು. ನೋಡಿದ್ದರೆ ತುಂಬ ಹೆಮ್ಮೆ ಪಡುತ್ತಿದ್ದರು. ಮೇಲಿಂದ ನೋಡಿ ಅಷ್ಟೇ ಆಶೀರ್ವಾದ ಮಾಡುತ್ತಿರುತ್ತಾರೆ. ನಾನು ಇಂದು ಇಲ್ಲಿ ನಿಂತಿದ್ದಕ್ಕೆ ಕಾಶಿನಾಥ್ ಸರ್ ಕಾರಣ’ ಎಂದು ಉಪೇಂದ್ರ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್

ಹೋಟೆಲ್ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್ನಿಂದ ವಾಪಸ್ಸಾದವರು

ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್

ಮ್ಯಾನ್ಮಾರ್ಗೆ ಸಹಾಯ ಮಾಡುವ ಆಪರೇಷನ್ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
