ಚಾಮುಂಡಿ ಬೆಟ್ಟದ ಬೆಂಕಿ ಹತೋಟಿಗೆ ಸಿಗುತ್ತಿಲ್ಲ..ಅಗ್ನಿ ಶಾಮಕ-ಅರಣ್ಯ ಸಿಬ್ಬಂದಿ ಏನು ಮಾಡಲಾಗ್ತಿಲ್ಲ
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಯ ಕೆನ್ನಾಲಿಗೆಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಮಾಡಲಾಗುತ್ತಿದೆ. ಆದರೂ ಸಹ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ರಾತ್ರಿಯಾದರೂ ಸಹ ಬೆಂಕಿಯ ಕೆನ್ನಾಲಿಗೆ ಇನ್ನು ಹೆಚ್ಚಾಗುತ್ತಲೇ ಇದೆ. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದೆ.
ಮೈಸೂರು, (ಫೆಬ್ರವರಿ 21): ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿಕೊಂಡಿದೆ. ಬೆಂಕಿ ಕೆನ್ನಾಲಿಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಬೆಟ್ಟದ ಸುತ್ತ ನೂರಾರು ಎಕರೆಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಆದರೆ ಬೆಂಕಿ ತಹಬದಿಗೆ ಸಿಗುತ್ತಿಲ್ಲ. ಚಾಮುಂಡಿ ಬೆಟ್ಟದಿಂದ ಉತ್ತನಹಳ್ಳಿಗೆ ತೆರಳುವ ಮಾರ್ಗದಲ್ಲಿ ಒಟ್ಟು ಮೂರು ಕಡೆ ಧಗ ಧಗಿಸುತ್ತಿದೆ. ರಸ್ತೆ ಸಂಪರ್ಕ ಇಲ್ಲದ ಕಾರಣ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಧ್ಯಾಹ್ನದಿಂದ ಈವರೆಗೂ ಹೊತ್ತಿ ಉರಿಯುತ್ತಿದೆ. ಈ ಹಿನ್ನಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಫೈಯರ್ ಲೈನ್ ಮಾಡಿ ಕಾದು ಕುಳಿತಿದ್ದಾರೆ. ಇನ್ನು ಬೆಂಕಿಯ ಕೆನ್ನಾಲಿಗೆ ಹೇಗಿದೆ ಎನ್ನುವುದನ್ನು ನಮ್ಮ ಮೈಸೂರು ಪ್ರತಿನಿಧಿ ಲೈವ್ ಆಗಿ ತೋರಿಸಿದ್ದಾರೆ ನೋಡಿ.
Published On - 10:04 pm, Fri, 21 February 25