ಕಾಶಿನಾಥ್ಗೆ ಆ್ಯಸಿಡ್ ಹಾಕಲು ಬಂದಿದ್ದರು: ಭಯಾನಕ ಘಟನೆ ನೆನೆದ ಉಪೇಂದ್ರ
ಕಾಶಿನಾಥ್ ಪುತ್ರ ಅಭಿಮನ್ಯು ನಟನೆಯ ‘ಸೂರಿ ಲವ್ಸ್ ಸಂಧ್ಯಾ’ ಸಿನಿಮಾದ ಟ್ರೇಲರ್ ಲಾಂಚ್ ವೇಳೆ ಉಪೇಂದ್ರ ಅವರು ನೆನಪಿನ ಪುಟ ತೆರೆದಿದ್ದಾರೆ. ಕಾಶಿನಾಥ್ ವ್ಯಕ್ತಿತ್ವ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಒಮ್ಮೆ ಕಾಶಿನಾಥ್ ಮೇಲೆ ಆ್ಯಸಿಡ್ ಹಾಕುವ ಪ್ರಯತ್ನ ನಡೆದಿತ್ತು ಎಂದು ಉಪೇಂದ್ರ ಅವರು ಹೇಳಿದ್ದಾರೆ.
ಉಪೇಂದ್ರ ಅವರು ಕಾಶಿನಾಥ್ ಗರಡಿಯಲ್ಲಿ ಬೆಳೆದವರು. ಕಾಶಿನಾಥ್ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗ ನಡೆದ ಒಂದು ಘಟನೆಯನ್ನು ಉಪೇಂದ್ರ ಈಗ ನೆನಪಿಸಿಕೊಂಡಿದ್ದಾರೆ. ‘ನಾನು ಕಾಶಿನಾಥ್ ಅವರ ಜೊತೆ ಕುಳಿತಿದ್ದಾಗ ಒಬ್ಬ ಬಂದು ಹಣಕ್ಕೆ ಬೇಡಿಕೆ ಇಟ್ಟ. ಹಣ ಕೊಡದಿದ್ದರೆ ಆ್ಯಸಿಡ್ ಹಾಕುವುದಾಗಿ ಬೆದರಿಸಿದ. ಮರು ದಿನ ಕೂಡ ಆ ವ್ಯಕ್ತಿ ಆ್ಯಸಿಡ್ ಬಾಟಲ್ ಹಿಡಿದುಕೊಂಡು ಬಂದ. ಆಗ ಕಾಶಿನಾಥ್ ಸ್ವಲ್ಪವೂ ಹೆದರದೇ ಒಬ್ಬರೇ ಇದ್ದರು. ಅವರ ಮುಖ ನೋಡಿ ಆತ ವಾಪಸ್ ಹೋದ. ಅದು ಕಾಶಿನಾಥ್ ಅವರ ಹೀರೋಯಿಸಂ’ ಎಂದು ಉಪೇಂದ್ರ ಹೇಳಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos