ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಗೋ ಮೂತ್ರ ಸಿಂಪಡಣೆ: ದಲಿತ ಯುವಕರಿಗೆ ಗ್ರಾಮದ ಎಲ್ಲಾ ಟ್ಯಾಂಕ್ನ ನೀರು ಕುಡಿಸಿದ ತಹಶೀಲ್ದಾರ್
ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಕ್ಕೆ ತಹಶೀಲ್ದಾರ್ ಬಸವರಾಜು ಭೇಟಿ ನೀಡಿ ದಲಿತ ಯುವಕರಿಗೆ ಟ್ಯಾಂಕ್ನ ನೀರನ್ನು ಕುಡಿಸಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿದ್ದಾರೆ.
ಚಾಮರಾಜನಗರ: ನಿನ್ನೆ (ನ.19) ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ನಡೆದ ಮದುವೆಗೆ ದಲಿತ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ದಲಿತ ಮಹಿಳೆ ಗ್ರಾಮದ ಟ್ಯಾಂಕ್ವೊಂದರ ನಲ್ಲಿಯಲ್ಲಿ ನೀರು ಕುಡಿದಿದ್ದರು. ಆಗ ಓರ್ವ ಗ್ರಾಮಸ್ಥ ಇದು ಬ್ರಾಹ್ಮಣರ ಬೀದಿ ಇಲ್ಲಿ ನೀರು ಕುಡಿಯಬಾರದು ಎಂದಿದ್ದನು. ಬಳಿಕ ಗೋಮೂತ್ರ ಸಿಂಪಡಿಸಿ ಟ್ಯಾಂಕ್ ಸ್ವಚ್ಛಗೊಳಿಸಲಾಗಿತ್ತು. ಈ ಬಗ್ಗೆ ತಹಶೀಲ್ದಾರ್ ಬಸವರಾಜುಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಹೀಗಾಗಿ ಇಂದು (ನ.20) ಹೆಗ್ಗೊಠಾರ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ, ತಹಶೀಲ್ದಾರ್ ಬಸವರಾಜು ಭೇಟಿ ನೀಡಿ ಗ್ರಾಮದ ಎಲ್ಲಾ ಟ್ಯಾಂಕ್ನ ನಲ್ಲಿಯಿಂದ ದಲಿತ ಯುವಕರಿಗೆ ನೀರು ಕುಡಿಸಿದ್ದಾರೆ.
ಬಳಿಕ ತಹಶೀಲ್ದಾರ್ ಬಸವರಾಜು ಎಲ್ಲಾ ಸಮುದಾಯದ ಮುಖಂಡರ ಸಭೆ ನಡೆಸಿದ್ದಾರೆ. ಟ್ಯಾಂಕ್ ಮೇಲೆ ಇದು ಸಾರ್ವಜನಿಕರ ಉಪಯೋಗಕ್ಕಾಗಿ. ಎಲ್ಲಾ ವರ್ಗದವರು ಕೂಡ ಕುಡಿಯಲು ನೀರನ್ನು ಬಳಸಬಹುದೆಂದು ಬರೆಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಗ್ರಾಮಸ್ಥರಿಗೆ ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.
Published on: Nov 20, 2022 07:43 PM
Latest Videos