ಕಾರಿನಲ್ಲೇ ಒಳಗೆ ನುಗ್ಗಿ ಗುಂಡಿನ ದಾಳಿ; ಧಗಧಗನೆ ಹೊತ್ತಿ ಉರಿದ ಅಮೆರಿಕದ ಚರ್ಚ್
ಅಮೆರಿಕದ ಮಿಚಿಗನ್ನ ಗ್ರ್ಯಾಂಡ್ ಬ್ಲಾಂಕ್‌ನಲ್ಲಿ ಜೀಸಸ್ ಕ್ರೈಸ್ಟ್ ಆಫ್ ಲೇಟರ್-ಡೇ ಸೇಂಟ್ಸ್ ಚರ್ಚ್‌ನೊಳಗೆ ತನ್ನ ಕಾರಿನಲ್ಲಿ ನುಗ್ಗಿದ 40 ವರ್ಷದ ಥಾಮಸ್ ಜಾಕೋಬ್ ಸ್ಯಾನ್‌ಫೋರ್ಡ್ ಎಂಬ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಒಬ್ಬನೇ ವ್ಯಕ್ತಿ ಭಾರೀ ಪ್ರಬಲವಾದ ಬಂದೂಕಿನಿಂದ ಗುಂಡು ಹಾರಿಸಿದ್ದು, ಇಡೀ ಚರ್ಚ್ ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ವಾಷಿಂಗ್ಟನ್, ಸೆಪ್ಟೆಂಬರ್ 28: ಭಾನುವಾರ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಅಮೆರಿಕದ ಮಿಚಿಗನ್ನ (Michigan Church) ಗ್ರ್ಯಾಂಡ್ ಬ್ಲಾಂಕ್‌ನಲ್ಲಿ ಜೀಸಸ್ ಕ್ರೈಸ್ಟ್ ಆಫ್ ಲೇಟರ್-ಡೇ ಸೇಂಟ್ಸ್ ಚರ್ಚ್‌ನೊಳಗೆ ತನ್ನ ಕಾರಿನಲ್ಲಿ ನುಗ್ಗಿದ 40 ವರ್ಷದ ಥಾಮಸ್ ಜಾಕೋಬ್ ಸ್ಯಾನ್‌ಫೋರ್ಡ್ ಎಂಬ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಒಬ್ಬನೇ ವ್ಯಕ್ತಿ ಭಾರೀ ಪ್ರಬಲವಾದ ಬಂದೂಕಿನಿಂದ ಗುಂಡು ಹಾರಿಸಿದ್ದು, ಇಡೀ ಚರ್ಚ್ ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ಶೂಟರ್ಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಆತ ಯಾವ ಕಾರಣಕ್ಕೆ ಈ ಗುಂಡಿನ ದಾಳಿ ನಡೆಸಿದ್ದಾನೆ ಎಂಬುದು ದೃಢಪಟ್ಟಿಲ್ಲ. ಇಡೀ ಚರ್ಚ್ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

