ಸೋರುತ್ತಿದೆ ಕದಂಬರು ನಿರ್ಮಿಸಿದ ಬನವಾಸಿಯ ಮಧುಕೇಶ್ವರ ದೇವಸ್ಥಾನ: ಕಣ್ಮುಚ್ಚಿ ಕುಳಿತ ಸರ್ಕಾರ
ಉತ್ತರ ಕನ್ನಡದ ಬನವಾಸಿಯಲ್ಲಿರುವ ಐತಿಹಾಸಿಕ ಮಧುಕೇಶ್ವರ ದೇವಸ್ಥಾನದ ಛಾವಣಿ ಅಬ್ಬರದ ಮಳೆಯಿಂದ ಸೋರುತ್ತಿದೆ. 2010ರ ನವೀಕರಣದ ನಂತರ ಮತ್ತೆ ಸೋರಿಕೆ ಆರಂಭವಾಗಿದೆ. ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ದೇವಸ್ಥಾನದ ಸ್ಥಿತಿ ಹದಗೆಟ್ಟಿದೆ. 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದರೂ, ದುರಸ್ತಿ ಕಾರ್ಯಗಳು ಇನ್ನೂ ಆರಂಭವಾಗಿಲ್ಲ. ಈ ಐತಿಹಾಸಿಕ ಸ್ಮಾರಕವನ್ನು ಉಳಿಸಲು ತುರ್ತು ಕ್ರಮ ಅಗತ್ಯ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಮಧುಕೇಶ್ವರ ದೇವಸ್ಥಾನ ಅಬ್ಬರದ ಮಳೆಯಿಂದ ಸೊರುತ್ತಿದೆ. ಬನವಾಸಿ ಕದಂಬರ ರಾಜಧಾನಿಯಾಗಿದೆ. ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯಲ್ಲಿ 2ನೇ ಶತಮಾನದಲ್ಲಿ ಕದಂಬರು ನಿರ್ಮಾಣ ಮಾಡಿರುವ ಮದುಕೇಶ್ವರ ದೇವಸ್ಥಾನ ಸೋರುತ್ತಿದೆ. ದೇವಸ್ಥಾನ ಸೋರಲು ಆರಂಭವಾಗಿ ಐದು ವರ್ಷ ಕಳೆದರೂ ಪುರಾತತ್ವ ಇಲಾಖೆ ನವೀಕರಣ ಮಾಡದೆ ಹಾಗೆ ಬಿಟ್ಟಿದ್ದು, ಛಾವಣಿಗೆ ಟರಪಾಲು ಹಾಕಿದೆ. 2010 ರಲ್ಲಿ ದೇವಸ್ಥಾನದ ಮೆಲ್ಛಾವಣಿಯನ್ನ L&Tಕಂಪನಿಯಿಂದ ನವೀಕರಣ ಮಾಡಲಾಗಿತ್ತು. ನವೀಕರಣ ಮಾಡಿದ 10 ವರ್ಷದಲ್ಲಿ ದೇವಸ್ಥಾನ ಮತ್ತೆ ಸೋರುತ್ತಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೆ 50 ಲಕ್ಷ ರೂಪಾಯಿ ಮಂಜೂರಾಗಿದೆ.
