Video: ಬಿಜೆಪಿ ಸಂಸದನ ಸಹೋದರಿ ಸ್ನಾನ ಮಾಡುವಾಗ ಕದ್ದು ವಿಡಿಯೋ ಮಾಡಿದ ಮಾವ, ಪ್ರತಿಭಟಿಸಿದ್ದಕ್ಕೆ ರಸ್ತೆಯಲ್ಲೇ ಹಲ್ಲೆ
ಮನೆಯ ಸೊಸೆ ಅಥವಾ ಮಗಳ ಚಾರಿತ್ರ್ಯಕ್ಕೆ ಕಳಂಕ ಬಾರದಂತೆ ಕಾಪಾಡಬೇಕಿದ್ದ ಮಾವನೇ ನೀಚ ಕೆಲಸ ಮಾಡಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ಸಂಸದನ ಸಹೋದರಿ ಸ್ನಾನ ಮಾಡುತ್ತಿರುವಾಗ ಆಕೆಯ ಮಾವನೇ ವಿಡಿಯೋವನ್ನು ಮಾಡಿದ್ದ, ಇದನ್ನು ತಿಳಿದ ಮಹಿಳೆ ಪ್ರತಿಭಟಿಸಿದ್ದಕ್ಕೆ ರಸ್ತೆಯಲ್ಲೇ ಆಕೆಯ ಮೇಲೆ ಮಾವ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಇಟಾ, ಸೆಪ್ಟೆಂಬರ್ 08: ಮನೆಯ ಸೊಸೆ ಅಥವಾ ಮಗಳ ಚಾರಿತ್ರ್ಯಕ್ಕೆ ಕಳಂಕ ಬಾರದಂತೆ ಕಾಪಾಡಬೇಕಿದ್ದ ಮಾವನೇ ನೀಚ ಕೆಲಸ ಮಾಡಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ಸಂಸದನ ಸಹೋದರಿ ಸ್ನಾನ ಮಾಡುತ್ತಿರುವಾಗ ಆಕೆಯ ಮಾವನೇ ವಿಡಿಯೋವನ್ನು ಮಾಡಿದ್ದ, ಇದನ್ನು ತಿಳಿದ ಮಹಿಳೆ ಪ್ರತಿಭಟಿಸಿದ್ದಕ್ಕೆ ರಸ್ತೆಯಲ್ಲೇ ಆಕೆಯ ಮೇಲೆ ಮಾವ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಫರೂಕಾಬಾದ್ ಬಿಜೆಪಿ ಸಂಸದ ಮುಖೇಶ್ ರಜಪೂತ್ ಅವರ ಸಹೋದರಿಯ ಮೇಲೆ ಹಲ್ಲೆ ಮತ್ತು ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾನು ಸ್ನಾನ ಮಾಡುತ್ತಿದ್ದಾಗ ತನ್ನ ಮಾವ ಮತ್ತು ಸೋದರ ಮಾವ ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ ಎಂದು ರೀನಾ ಹೇಳಿಕೊಂಡಿದ್ದಾರೆ. ತನಗೆ ಇಬ್ಬರು ಹೆಣ್ಣುಮಕ್ಕಳಾದ ಕಾರಣ ಅತ್ತೆ, ಮಾವ ನನ್ನನ್ನು ದ್ವೇಷಿಸುತ್ತಿದ್ದರು ಎಂದು ರೀನಾ ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

