ನನಗೆ ಕಚ್ಚಿದ್ದು ಇದೇ ಹಾವು, ಚಿಕಿತ್ಸೆ ಕೊಡಿ ಎಂದು ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ರೋಗಿ

|

Updated on: Aug 25, 2024 | 11:20 AM

ವ್ಯಕ್ತಿಯೊಬ್ಬನ ಕಾಲಿನ ಹೆಬ್ಬರಳಿಗೆ ಹಾವು ಕಚ್ಚಿತ್ತು, ಆತ ತಡ ಮಾಡದೇ ಹಾವಿನ ಜತೆಯಲ್ಲೇ ಆಸ್ಪತ್ರೆಗೆ ಬಂದಿದ್ದಾನೆ. ತನಗೆ ಕಚ್ಚಿದ್ದು ಇದೇ ಹಾವು, ಬೇಗ ಚಿಕಿತ್ಸೆ ನೀಡಿ ಎಂದು ವೈದ್ಯರ ಬಳಿ ಮನವಿ ಮಾಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್​ ಖೇರಿಯಲ್ಲಿ ನಡೆದಿದೆ.

ಮನ್​ಹರಿ ಮಿಶ್ರಾ ಎಂಬಾತನಿಗೆ ಹಾವು ಕಚ್ಚಿತ್ತು, ಆದರೂ ಆತ ಗಾಬರಿಯಾಗಲಿಲ್ಲ, ಹಾವನ್ನು ಪ್ಲಾಸ್ಟಿಕ್ ಬಾಕ್ಸ್​ವೊಂದರಲ್ಲಿ ಹಾಕಿಕೊಂಡು ಬಂದಿದ್ದು ವೈದ್ಯರು ಅಚ್ಚರಿಗೊಂಡಿದ್ದಾರೆ..
ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ, ಈ ಸಂಪೂರ್ಣ ಘಟನೆಯನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ