ಬ್ಯಾಟಿಂಗ್‌ನಲ್ಲಿ ವಿಫಲ, ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್; ವಿಡಿಯೋ
India U19 Dominates Pakistan in Asia Cup: U19 ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು 90 ರನ್‌ಗಳಿಂದ ಸೋಲಿಸಿದೆ. ಬ್ಯಾಟಿಂಗ್‌ನಲ್ಲಿ ವಿಫಲರಾದರೂ ವೈಭವ್ ಸೂರ್ಯವಂಶಿ ಪಾಕ್ ನಾಯಕನ ವಿಕೆಟ್ ಪಡೆದು ಬೌಲಿಂಗ್ ಮ್ಯಾಜಿಕ್ ಪ್ರದರ್ಶಿಸಿದರು. ಆರನ್ ಜಾರ್ಜ್ (85), ಕನಿಷ್ಕ್ ಚೌಹಾಣ್ (46, 3 ವಿಕೆಟ್) ಮತ್ತು ದೀಪೇಶ್ ದೇವೇಂದ್ರನ್ (3 ವಿಕೆಟ್) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ಏಕಪಕ್ಷೀಯ ಜಯ ಸಾಧಿಸಿತು.
ವೈಭವ್ ಸೂರ್ಯವಂಶಿ ಹೆಸರು ಕೇಳಿದಾಗಲೆಲ್ಲಾ ಅಭಿಮಾನಿಗಳು ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನು ನಿರೀಕ್ಷಿಸುತ್ತಾರೆ. ಆದರೆ ಪಾಕಿಸ್ತಾನ ವಿರುದ್ಧ ನಡೆದ ಅಂಡರ್ -19 ಏಷ್ಯಾಕಪ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾದ ವೈಭವ್ ಸೂರ್ಯವಂಶಿ, ಬೌಲಿಂಗ್‌ನಲ್ಲಿ ತಮ್ಮ ಮ್ಯಾಜಿಕ್ ತೋರಿಸಿದ್ದಾರೆ. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಕೇವಲ 5 ರನ್ಗಳನ್ನಷ್ಟೇ ಕಲೆಹಾಕಿದರು. ಆದರೆ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಿದ ವೈಭವ್ ಪಾಕ್ ನಾಯಕನ ವಿಕೆಟ್ ಉರುಳಿಸಿದರು.
ಭಾರತ ನೀಡಿದ 240 ರನ್ಗಳ ಗುರಿ ಬೆನ್ನಟ್ಟುತ್ತಿದ್ದ ಪಾಕಿಸ್ತಾನದ ಪರ ಜವಾಬ್ದಾರಿಯುತ ಇನ್ನಿಂಗ್ಸ್ ಆಡುತ್ತಿದ್ದ ಪಾಕಿಸ್ತಾನಿ ನಾಯಕ ಫರ್ಹಾನ್ ಯೂಸುಫ್ ಅವರನ್ನು ವೈಭವ್ ಸೂರ್ಯವಂಶಿ ಔಟ್ ಮಾಡಿದರು. ಫರ್ಹಾನ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 23 ರನ್ ಬಾರಿಸಿ ಔಟಾದರು. ಆದಾಗ್ಯೂ ಅವರು ಹುಜೈಫಾ ಎಹ್ಸಾನ್ ಜೊತೆಗೂಡಿ 47 ರನ್ಗಳ ಜೊತೆಯಾಟವನ್ನಾಡಿದರು. ಆದರೆ ಸೂರ್ಯವಂಶಿ 24 ನೇ ಓವರ್‌ನಲ್ಲಿ ಪಾಕಿಸ್ತಾನಿ ನಾಯಕನ ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾದ ಗೆಲುವನ್ನು ಖಚಿತಪಡಿಸಿದರು.
ಅಂಡರ್-19 ಏಷ್ಯಾಕಪ್‌ನ ಐದನೇ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 90 ರನ್‌ಗಳಿಂದ ಸೋಲಿಸಿ ಏಕಪಕ್ಷೀಯ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 240 ರನ್‌ಗಳನ್ನು ಗಳಿಸಿದರೆ, ಪಾಕಿಸ್ತಾನ 150 ರನ್‌ಗಳಿಗೆ ಆಲೌಟ್ ಆಯಿತು. ಆರನ್ ಜಾರ್ಜ್, ಕನಿಷ್ಕ್ ಚೌಹಾಣ್ ಮತ್ತು ದೀಪೇಶ್ ದೇವೇಂದ್ರನ್ ಭಾರತದ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದರು. ಆರನ್ ಜಾರ್ಜ್ 85 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಕನಿಷ್ಕ್ ಚೌಹಾಣ್ 46 ರನ್ ಗಳಿಸಿ ಮೂರು ವಿಕೆಟ್‌ಗಳನ್ನು ಸಹ ಪಡೆದರು. ದೀಪೇಶ್ ಕೂಡ ಮೂರು ವಿಕೆಟ್‌ಗಳನ್ನು ಕಬಳಿಸಿ ಪಾಕಿಸ್ತಾನದ ಸೋಲನ್ನು ಖಚಿತಪಡಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

