ನಾಳೆ ಆರಂಭವಾಗಬೇಕಿದ್ದ ವೈಷ್ಣೋದೇವಿ ಯಾತ್ರೆ ಮಳೆಯಿಂದ ಮತ್ತೆ ಸ್ಥಗಿತ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯ ನಂತರ ಆಗಸ್ಟ್ 26ರಂದು ವೈಷ್ಣೋದೇವಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದೇ ದಿನ ಯಾತ್ರೆಯ ಮಾರ್ಗದಲ್ಲಿ ದೊಡ್ಡ ಭೂಕುಸಿತ ಸಂಭವಿಸಿ 34 ಜನರು ಸಾವನ್ನಪ್ಪಿದರು ಮತ್ತು 20 ಜನರು ಗಾಯಗೊಂಡಿದ್ದರು. ನಂತರ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಯಾತ್ರೆ ಮಾರ್ಗದಲ್ಲಿ ಅಧ್ಕುವಾರಿ ಬಳಿ ಸಂಭವಿಸಿದ ಭೂಕುಸಿತ ಘಟನೆಯ ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದರು.
ಶ್ರೀನಗರ, ಸೆಪ್ಟೆಂಬರ್ 13: 19 ದಿನಗಳ ಕಾಲ ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆಯನ್ನು (Vaishnodevi Yatra) ನಾಳೆಯಿಂದ (ಸೆಪ್ಟೆಂಬರ್ 14) ಮರು ಆರಂಭಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಭವನ್ ಟ್ರ್ಯಾಕ್‌ನಲ್ಲಿ ಭಾರೀ ಮಳೆಯಾದ ನಂತರ ಮುಂದಿನ ಆದೇಶದವರೆಗೆ ಮತ್ತೆ ಈ ಯಾತ್ರೆಯನ್ನು ಮುಂದೂಡಲಾಗಿದೆ ಎಂದು ದೇವಾಲಯ ಮಂಡಳಿ ಪ್ರಕಟಿಸಿದೆ. “ಜೈ ಮಾತಾ ದಿ! ಭವನ ಮತ್ತು ಟ್ರ್ಯಾಕ್‌ನಲ್ಲಿ ನಿರಂತರ ಮಳೆಯಿಂದಾಗಿ ಸೆಪ್ಟೆಂಬರ್ 14ರಿಂದ ನಿಗದಿಯಾಗಿದ್ದ ಶ್ರೀ ಮಾತಾ ವೈಷ್ಣೋದೇವಿ ಯಾತ್ರೆಯ ಆರಂಭವನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ” ಎಂದು ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯ ನಂತರ ಆಗಸ್ಟ್ 26ರಂದು ವೈಷ್ಣೋದೇವಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದೇ ದಿನ ಯಾತ್ರೆಯ ಮಾರ್ಗದಲ್ಲಿ ದೊಡ್ಡ ಭೂಕುಸಿತ ಸಂಭವಿಸಿ 34 ಜನರು ಸಾವನ್ನಪ್ಪಿದರು ಮತ್ತು 20 ಜನರು ಗಾಯಗೊಂಡಿದ್ದರು. ನಂತರ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಯಾತ್ರೆ ಮಾರ್ಗದಲ್ಲಿ ಅಧ್ಕುವಾರಿ ಬಳಿ ಸಂಭವಿಸಿದ ಭೂಕುಸಿತ ಘಟನೆಯ ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ