ನಾಗೇಂದ್ರ ಜತೆಗೆ ಜನಾರ್ದನ ರೆಡ್ಡಿ. ರೇಣುಕಾಚಾರ್ಯಗೂ ಸಂಕಷ್ಟ?

Edited By:

Updated on: Aug 29, 2026 | 3:13 PM

ಇಡಿ ಸಹ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯಪಾಲರು ಸಹ ನಾಗೇಂದ್ರ ವಿರುದ್ಧದ ಪ್ರಾಸಿಕ್ಯೂಷನ್ ಅನುನತಿಗೆ ಸಚಿವ ಸಂಪುಟ ಅಭಿಪ್ರಾಯ ಕೇಳಿದ್ದಾರೆ. ನಾಗೇಂದ್ರ ಜೊತೆ ಜನಾರ್ಧನ ರೆಡ್ಡಿ ಹಾಗೂ ರೇಣುಕಾಚಾರ್ಯ ವಿರುದ್ದದ ಕೇಸ್ ಬಗ್ಗೆ ಸಂಪುಟ ಅಭಿಪ್ರಾಯ ಕೇಳಿದೆ ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯಪಾಲರ ನಡೆಗೆ ಸರ್ಕಾರ ಕೌಂಟರ್ ಕೊಡುವ ಸಾಧ್ಯತೆಗಳಿವೆ.

ಬೆಂಗಳೂರು, (ಆಗಸ್ಟ್ 29):  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇದರ ಮಧ್ಯೆ ಇಡಿ ಸಹ ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯಪಾಲರು ಸಹ ನಾಗೇಂದ್ರ ವಿರುದ್ಧದ ಪ್ರಾಸಿಕ್ಯೂಷನ್ ಅನುನತಿಗೆ ಸಚಿವ ಸಂಪುಟ ಅಭಿಪ್ರಾಯ ಕೇಳಿದ್ದಾರೆ. ನಾಗೇಂದ್ರ ಜೊತೆ ಜನಾರ್ಧನ ರೆಡ್ಡಿ ಹಾಗೂ ರೇಣುಕಾಚಾರ್ಯ ವಿರುದ್ದದ ಕೇಸ್ ಬಗ್ಗೆ ಸಂಪುಟ ಅಭಿಪ್ರಾಯ ಕೇಳಿದೆ ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯಪಾಲರ ನಡೆಗೆ ಸರ್ಕಾರ ಕೌಂಟರ್ ಕೊಡುವ ಸಾಧ್ಯತೆಗಳಿವೆ. ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಇತರ ಕೇಸ್ ಗಳ ಪ್ರಾಸಿಕ್ಯೂಷನ್ ಬಾಕಿ ಇರುವ ಬಗ್ಗೆಯೂ ಮಾಹಿತಿ ಕೊಡಿ ಎಂದು ಮಾಹಿತಿ ಕೇಳುವ ಚಿಂತನೆ ನಡೆಸಿದೆ. ಈ ಬಗ್ಗೆ ಕಾನೂನು ಆಯ್ಕೆ ಹುಡುಕುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us