Mysuru Dasara: ಶಂಖ-ಚಕ್ರ, ಗಂಡಬೇರುಂಡ ಚಿತ್ತಾರ; ಅಭಿಮನ್ಯುಗೆ ಬಣ್ಣದ ಅಲಂಕಾರ

Edited By:

Updated on: Oct 02, 2025 | 2:05 PM

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗಿಯಾಗಲಿರುವ ಗಜಪಡೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ಕಲಾವಿದ ನಾಗಲಿಂಗಪ್ಪ ನೇತೃತ್ವದ 8 ಜನರ ತಂಡ ಇದಕ್ಕಾಗಿ ಕೆಲಸ ಮಾಡಿದೆ. ಅಭಿಮನ್ಯು ಮೈಮೇಲೆ ಶಂಖ-ಚಕ್ರ, ಗಿಳಿ, ಗಂಡಬೇರುಂಡ ಚಿತ್ತಾರಗಳು ಮೂಡಿದ್ದು, ವಿಶೇಷ ವರ್ಣಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿವೆ.

ಮೈಸೂರು, ಅಕ್ಟೋಬರ್​ 2: ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಜಂಬೂ ಸವಾರಿಗೆ ಕೌಂಟ್ ಡೌನ್ ಶುರುವಾಗಿದೆ. ಕೂಂಬಿಂಗ್ ಕಿಂಗ್ ಅಭಿಮನ್ಯು ವಿಶೇಷ ವರ್ಣಾಲಂಕಾರದಿಂದ ಮಿರ ಮಿರ ಮಿಂಚುತಿದ್ದು, ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ 8 ಮಂದಿ ಕಲಾವಿದರು ಇದಕ್ಕಾಗಿ ಕೆಲಸ ಮಾಡಿದ್ದಾರೆ. ಅಭಿಮನ್ಯು ಮೈಮೇಲೆ ಶಂಖ-ಚಕ್ರ, ಗಿಳಿ, ಗಂಡಬೇರುಂಡ ಚಿತ್ತಾರಗಳು ಮೂಡಿದ್ದು, ಎಲ್ಲ ಆನೆಗಳಿಗೂ ವಿಶೇಷ ಅಲಂಕಾರ ಮಾಡಲಾಗಿದೆ. ಮೈ ಮೇಲೆ ಬಣ್ಣ ಬಳಿಯುತ್ತಿದ್ದರೂ ಅಭಿಮಾನ್ಯು ಕೂಲ್ ಆಗಿಯೇ ನಿಂತಿರುವ ದೃಶ್ಯ ಕಂಡುಬಂತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.