ಮೈಸೂರು ದಸರಾ 2025: 58 ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭ, ಶಕ್ತಿ ಯೋಜನೆ ಪ್ರಮುಖ ಆಕರ್ಷಣೆ
ಮೈಸೂರು ದಸರಾ 2025ರ ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭವಾಗಿದೆ. 58 ಸ್ತಬ್ಧಚಿತ್ರಗಳು, ಸರ್ಕಾರಿ ಯೋಜನೆಗಳಾದ ಶಕ್ತಿ ಯೋಜನೆಯಂತಹ ಪ್ರಮುಖ ವಿಷಯಗಳನ್ನು ಪ್ರದರ್ಶಿಸುತ್ತಿವೆ. ಆಕರ್ಷಕ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡುತ್ತಿವೆ. .ಈ ವರ್ಷದ ಮೆರವಣಿಗೆಯಲ್ಲಿ ಶಕ್ತಿ ಯೋಜನೆಯ ಸ್ತಬ್ಧಚಿತ್ರವು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಈ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ
ಮೈಸೂರು, ಅ.2: ಮೈಸೂರು ದಸರಾದ (Mysuru Dasara) ವೈಭವ ಹೆಚ್ಚಿಸಲು ಸ್ತಬ್ಧಚಿತ್ರಗಳ ಅದ್ಧೂರಿ ಮೆರವಣಿಗೆಯೊಂದಿಗೆ ಆರಂಭವಾಗಿದೆ. ಒಟ್ಟು 58 ಸ್ತಬ್ಧಚಿತ್ರಗಳು ಈ ಬಾರಿಯ ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿವೆ. ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಸ್ತಬ್ಧಚಿತ್ರಗಳನ್ನು ವಿನ್ಯಾಸಗೊಳಿಸಲಾಗಿದೆ.ಈ ವರ್ಷದ ಮೆರವಣಿಗೆಯಲ್ಲಿ ಶಕ್ತಿ ಯೋಜನೆಯ ಸ್ತಬ್ಧಚಿತ್ರವು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ಒದಗಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತಂದಿರುವ ಈ ಯೋಜನೆಯ ಯಶಸ್ಸನ್ನು ಸ್ತಬ್ಧಚಿತ್ರವು ಪರಿಣಾಮಕಾರಿಯಾಗಿ ಪ್ರದರ್ಶಿಸುತ್ತಿದೆ. ಯೋಜನೆ ಜಾರಿಯಾದ ನಂತರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದು ಹಾಗೂ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಸರ್ಕಾರದ ಉದ್ದೇಶ ಸಫಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ತಮ್ಮ ಸಾಧನೆಯನ್ನು ರಾಜ್ಯಕ್ಕೆ ತಲುಪಿಸುವ ಪ್ರಯತ್ನವನ್ನು ಸರ್ಕಾರ ಈ ಸ್ತಬ್ಧಚಿತ್ರದ ಮೂಲಕ ಮಾಡುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

