‘ಮೊದಲು ನೀವು ಏನು ಅಂತ ನೋಡಿಕೊಳ್ಳಿ’: ಸಂಗೀತಾಗೆ ವರ್ತೂರು ಸಂತೋಷ್​ ಆವಾಜ್​

‘ಮೊದಲು ನೀವು ಏನು ಅಂತ ನೋಡಿಕೊಳ್ಳಿ’: ಸಂಗೀತಾಗೆ ವರ್ತೂರು ಸಂತೋಷ್​ ಆವಾಜ್​

ಮದನ್​ ಕುಮಾರ್​
|

Updated on: Jan 17, 2024 | 5:04 PM

ಸಂಗೀತಾ ಶೃಂಗೇರಿ ಮಾತನಾಡಿದ್ದು ವರ್ತೂರು ಸಂತೋಷ್​ ಅವರಿಗೆ ಸರಿ ಎನಿಸಿಲ್ಲ. ಹಾಗಾಗಿ ಅವರು ನೇರವಾಗಿ ಖಂಡಿಸಿದ್ದಾರೆ. ‘ನಾನು ಹೇಳೋದು ಕೇಳ್ರಿ. ಒಬ್ಬರ ಮೇಲೆ ಆರೋಪ ಮಾಡೋದಕ್ಕಿಂತ ಮುಂಚೆ ನೀವು ಏನು ಎಂಬುದನ್ನು ನೋಡಿಕೊಂಡರೆ ತುಂಬ ಉತ್ತಮವಾಗಿರುತ್ತೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ.

ಬಿಗ್ ಬಾಸ್​ ಮನೆಯಲ್ಲಿ ಈಗ ಪೈಪೋಟಿ ಹೆಚ್ಚಾಗಿದೆ. ಫಿನಾಲೆಯಲ್ಲಿ (Bigg Boss Finale) ಟ್ರೋಫಿ ಗೆಲ್ಲಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇದೆ. ಈಗಾಗಲೇ ಸಂಗೀತಾ ಶೃಂಗೇರಿ (Sangeetha Sringeri) ಅವರು ಫಿನಾಲೆಗೆ ಟಿಕೆಟ್​ ಪಡೆದಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಫಿನಾಲೆ ತಲುಪಲು ಪ್ರಯತ್ನಿಸುತ್ತಿದ್ದಾರೆ. ಈ ಹಂತದಲ್ಲಿ ಸಂಗೀತಾ ಶೃಂಗೇರಿ ಮತ್ತು ವರ್ತೂರು ಸಂತೋಷ್​ ನಡುವೆ ಕಿರಿಕ್​ ಆಗಿದೆ. ಸಂಗೀತಾ ಮಾತನಾಡಿದ್ದು ವರ್ತೂರು ಸಂತೋಷ್ (Varthur Santhosh)​ ಅವರಿಗೆ ಸರಿ ಎನಿಸಿಲ್ಲ. ಹಾಗಾಗಿ ಅವರು ನೇರವಾಗಿ ಖಂಡಿಸಿದ್ದಾರೆ. ‘ಇದು ತುಂಬ ಅಗೌರವಯುತವಾಗಿ ಕಾಣಿಸುತ್ತಿದೆ. ನಾನು ಹೇಳೋದು ಕೇಳ್ರಿ. ಒಬ್ಬರ ಮೇಲೆ ಆರೋಪ ಮಾಡೋದಕ್ಕಿಂತ ಮುಂಚೆ ನೀವು ಏನು ಎಂಬುದನ್ನು ನೋಡಿಕೊಂಡರೆ ತುಂಬ ಉತ್ತಮವಾಗಿರುತ್ತೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ. ಈ ಸಂಚಿಕೆ ಜನವರಿ 17ರಂದು ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ಚಾನೆಲ್​ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ