Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯಲ್ಲಿ ರಾಮನ ಸಾಕ್ಷಾತ್ಕಾರಕ್ಕೆ ಹಾರೋಹಳ್ಳಿಯ ಕಲ್ಲು ಅಷ್ಟೇ ಅಲ್ಲ; ಮಣ್ಣು ಸಹ ಬಳಕೆಯಾಗಿದೆ!

ಅಯೋಧ್ಯೆಯಲ್ಲಿ ರಾಮನ ಸಾಕ್ಷಾತ್ಕಾರಕ್ಕೆ ಹಾರೋಹಳ್ಳಿಯ ಕಲ್ಲು ಅಷ್ಟೇ ಅಲ್ಲ; ಮಣ್ಣು ಸಹ ಬಳಕೆಯಾಗಿದೆ!

ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​

Updated on: Jan 17, 2024 | 3:50 PM

ರಾಮ ಮೂರ್ತಿ ಕೆತ್ತನೆಗೆ ಬಳಸಿರುವ ಕೃಷ್ಣ ಶಿಲೆ ಕರಗಲ್ಲ, ಸಿಡಿಯಲ್ಲ, ಆಸಿಡ್ ಹಾಕಿದ್ರು ಏನೂ ಆಗಲ್ಲ. ಯಾವಾಗ ಇಲ್ಲಿನ ಕಲ್ಲು ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯಾಗುತ್ತಿರುವ ಮೂರ್ತಿ ಅಂತ ಅಂತಿಮವಾಯಿತೋ.. ಇದೀಗಾ ಆ ಸ್ಥಳದ ಮಣ್ಣನ್ನು ಸಹ ಅಯೋಧ್ಯೆಯ ಗುರುಗಳು ಬಂದು ತೆಗೆದುಕೊಂಡು ಹೋಗಿದ್ದಾರಂತೆ.

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈ‌ ನಡುವೆ ಮೂವರು ಶಿಲ್ಪಿಗಳಿಂದ ಬಾಲ ರಾಮನ ಮೂರ್ತಿ ಕೂಡ ಕೆತ್ತ‌ನೆಯಾಗಿದೆ. ಈ ಬಾಲ ರಾಮನ ಮೂರ್ತಿಗೆ ಕಲ್ಲು ಹೋಗಿದ್ದು ಮೈಸೂರಿನಿಂದಲೆ ಎಂಬುದು ಮತ್ತೊಂದು ವಿಶೇಷ. ಇದೀಗ ಕಲ್ಲು ಸಿಕ್ಕ‌ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು, ಕಲ್ಲು ಸಿಕ್ಕ ಸ್ಥಳದಲ್ಲಿ ಪೂಜೆ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಕೋಟ್ಯಾಂತರ ಜನರ ಕನಸಾಗಿತ್ತು. ಇದೀಗ ರಾಮ ಮಂದಿರ ನಿರ್ಮಾಣ ಬಹುತೇಕ ಪೂರ್ಣವಾಗಿದ್ದು ಮುಂದಿನ ವಾರವೇ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ.

ಈ ನಡುವೆ ರಾಮಮಂದಿರ ವಿಚಾರವಾಗಿ ಮೈಸೂರಿಗರಿಗೆ ಎರಡೆರಡು ಖುಷಿಯ ವಿಚಾರವಿದೆ. ಒಂದು ಕಡೆ ಬಾಲ ರಾಮನ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿ ಮೈಸೂರಿನ ಅರುಣ್ ಎಂಬುದು ಖುಷಿಯ ವಿಚಾರವಾದ್ರೆ… ರಾಮನ ಮೂರ್ತಿ ಕೆತ್ತನೆಗೆ ಬಳಸಿದ್ದು ಮೈಸೂರಿನ ಕೃಷ್ಣ ಶಿಲೆ ಎಂಬುದು ಮತ್ತೊಂದು ಹೆಮ್ಮೆಯ ವಿಚಾರ.

ಮೈಸೂರು ತಾಲೂಕು ಹಾರೋಹಳ್ಳಿಯ ರಾಮದಾಸ್ ಎಂಬುವರ ಜಮೀನಿನಲ್ಲಿ ಕೃಷ್ಣ ಶಿಲೆ ಸಿಕ್ಕಿದೆ.‌ ಇದೀಗ ಆ ಜಮೀನಿನಲ್ಲಿ ಕಲ್ಲು ಸಿಕ್ಕ ಸ್ಥಳದಲ್ಲಿ ಚಪ್ಪರ ಹಾಕಿ ಗುಜ್ಜೆಗೌಡನ ಪುರ ಹಾಗೂ ಹಾರೋಹಳ್ಳಿ ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಾರೆ. ಮೊದಲಿಗೆ ಇದು ಕೃಷಿಗೆ ಯೋಗ್ಯವಲ್ಲದ ಜಮೀನಾಗಿತ್ತು.ಇದರಿಂದ ಈ ಭೂಮಿಯನ್ನ ಗುಜ್ಜೆಗೌಡನಪುರದ ಶ್ರೀನಿವಾಸ್ ಎಂಬುವವರಿಗೆ ಕಲ್ಲು ತೆಗೆಯುವ ಗುತ್ತಿಗೆ ಕೊಟ್ಟಿದ್ದಾರೆ. ಇದೀಗ ಈ ಭೂಮಿಯಲ್ಲಿ ಸಿಕ್ಕಿದ ಕಲ್ಲು ರಾಮಲಲ್ಲಾ ಮೂರ್ತಿಯಾಗಿದೆ. ಇದು ನಾವು ಮಾಡಿದ ಯಾವ ಜನ್ಮದ ಪುಣ್ಯ ಇರಬೇಕು.‌ ಈ‌‌ ರೀತಿ ಕಲ್ಲು ಸಿಕ್ಕಿ ರಾಮನ‌ ಮೂರ್ತಿಯಾಗುತ್ತೆ ಅಂತ ನಾವು ಕನಸಿನಲ್ಲು ಯೋಚನೆ ಮಾಡಿರಲಿಲ್ಲ ಅಂತಾರೆ ಜಮೀನಿನ ಮಾಲೀಕ ರಾಮದಾಸ್.

Also Read: ಬೀದರ್ – ಶ್ರೀರಾಮ ಸ್ನಾನ ಮಾಡಿ ಪಾಪ ನಾಶ ಮಾಡಿಕೊಂಡ 125 ಎಕರೆಯ ಕೆರೆ ದುಃಸ್ಥಿತಿಯಲ್ಲಿದೆ, ಸರ್ಕಾರ ಕಣ್ಮುಚ್ಚಿ ಕುಳಿತಿದೆ

ಈ ಕಲ್ಲು ಸಾಕಷ್ಟು ವಿಶೇಷವಾದ ಕಲ್ಲು ಎಂದು ಹೇಳಲಾಗುತ್ತೆ. ಇದು ಮೈಸೂರು ಭಾಗದಲ್ಲೆ ಹೆಚ್ಚಾಗಿ ಸಿಗುತ್ತದೆಯಂತೆ. ಈ ಕಲ್ಲನ್ನು ಕೃಷ್ಣ ಶಿಲೆ ಎಂದು ಕರೆಯಲಾಗುತ್ತೆ. ಈ ಕಲ್ಲು ಆಸಿಡ್, ವಾಟರ್, ಫೈರ್, ರಸ್ಟ್ ಪ್ರೊಫ್ ನಿಂದ ಕೂಡಿರುವ ಕೃಷ್ಣ ಶಿಲೆಯಾಗಿದೆ. ಕೃಷ್ಣ ಶಿಲೆ ಕರಗಲ್ಲ, ಸಿಡಿಯಲ್ಲ, ಆಸಿಡ್ ಹಾಕಿದ್ರು ಏನೂ ಆಗಲ್ಲ, ಮಳೆ, ಗಾಳಿ, ಬಿಸಿಲಿಗೆ ಈ ಕೃಷ್ಣ ಶಿಲೆ ಏನೂ ಆಗಲ್ಲವಂತೆ. ಇನ್ನು ಯಾವಾಗ ಈ ಸ್ಥಳದಲ್ಲಿ ಸಿಕ್ಕ ಕಲ್ಲು ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯಾಗುತ್ತಿರುವ ಮೂರ್ತಿ ಅಂತ ಅಂತಿಮವಾಯಿತೋ.. ಇದೀಗಾ ಆ ಸ್ಥಳದ ಮಣ್ಣನ್ನು ಸಹ ಅಯೋಧ್ಯೆಯ ಗುರುಗಳು ಬಂದು ತೆಗೆದುಕೊಂಡು ಹೋಗಿದ್ದಾರೆ ಎಂದು ಕಲ್ಲನ್ನು ಕಳುಹಿಸಿಕೊಟ್ಟ ಶ್ರೀನಿವಾಸ್ ಹೇಳುತ್ತಾರೆ.

ಒಟ್ಟಾರೆ, ಇದೀಗಾ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯೊಂದಿಗೆ ಕೋಟ್ಯಾಂತರ ಭಕ್ತರ ಕನಸು ನನಸಾಗುತ್ತಿದ್ರೆ. ಇತ್ತ ಮೈಸೂರಿಗರಿಗೆ ರಾಮನ ಮೂರ್ತಿಯ ವಿಚಾರವಾಗಿ ಮತ್ತೊಂದು ಹೆಮ್ಮೆಯಾಗಿದೆ‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ