‘ಅಭಿಮಾನಿಗಳ ಸಾವಿನ ನೋವಿನಿಂದ ಯಶ್ ಇನ್ನೂ ಹೊರಬಂದಿಲ್ಲ’: ಆಪ್ತರ ಹೇಳಿಕೆ
ಹುಟ್ಟುಹಬ್ಬದ ದಿನವೇ ತಮ್ಮ ಅಭಿಮಾನಿಗಳ ದುರ್ಮರಣ ಆಗಿದ್ದಕ್ಕೆ ಯಶ್ ಬಹಳ ನೊಂದುಕೊಂಡಿದ್ದಾರೆ. ಮೂವರು ಅಭಿಮಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಕಳಿಸಿದ್ದಾರೆ. ಯಶ್ ಆಪ್ತರು ಈ ಚೆಕ್ ವಿತರಣೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ನಟ ಯಶ್ ಅವರ ಬರ್ತ್ಡೇ (Yash Birthday) ಆಚರಿಸಲು ತಯಾರಿ ನಡೆಸುತ್ತಿದ್ದ ಮೂವರು ಅಭಿಮಾನಿಗಳು ಜನವರಿ 7ರ ರಾತ್ರಿ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಆ ನೋವಿನಿಂದ ಯಶ್ ಅವರು ಇನ್ನೂ ಹೊರಬಂದಿಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ. ಹುಟ್ಟುಹಬ್ಬದ ದಿನವೇ ತಮ್ಮ ಅಭಿಮಾನಿಗಳ ದುರ್ಮರಣ ಆಗಿದ್ದಕ್ಕೆ ಯಶ್ (Yash ) ಬಹಳ ನೊಂದುಕೊಂಡಿದ್ದಾರೆ. ಮೂವರು ಅಭಿಮಾನಿಗಳ (Yash Fans) ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಕಳಿಸಿದ್ದಾರೆ. ಯಶ್ ಆಪ್ತರು ಈ ಚೆಕ್ ವಿತರಣೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದಾರೆ. ‘ಆ ಕುಟುಂಬಗಳ ಜೊತೆ ತಾವು ಇರುವುದಾಗಿ ಯಶ್ ಹೇಳಿದ್ದಾರೆ. ಅವರು ಹೇಳಿದ ಅಕೌಂಟ್ಗೆ ತಲಾ 5 ಲಕ್ಷ ರೂಪಾಯಿ ತಲುಪಿಸಿದ್ದೇವೆ. ಗಾಯಗೊಂಡವರನ್ನೂ ಭೇಟಿ ಮಾಡಿ, ವಿವರ ಪಡೆದಿದ್ದೇವೆ. ಯಶ್ ಸರ್ ಹೇಳಿದಂತೆ ವ್ಯವಸ್ಥೆ ಮಾಡುತ್ತೇವೆ’ ಎಂದು ಯಶ್ ಆಪ್ತರು ತಿಳಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos