ವರ್ತೂರು ಸಂತೋಷ್ ಅಮಾಯಕ, ಹುಲಿಯುಗುರಿನ ಪೆಂಡೆಂಟ್ ಧರಿಸುವುದು ಕಾನೂನುಬಾಹಿರ ಅಂತ ಅವರಿಗೆ ಗೊತ್ತಿರಲಾರದು: ಸ್ನೇಹಿತ

Edited By:

Updated on: Oct 26, 2023 | 12:37 PM

ಹುಲಿಯುಗುರಿನ ಲಾಕೆಟ್ ಅವರು ಸ್ವಇಚ್ಛೆಯಿಂದ ಧರಿಸಿರಲಾರರು, ಯಾವುದಾದರೂ ಸ್ವಾಮೀಜಿ ಅಥವಾ ಗುರುಗಳ ಸಲಹೆ ಮೇರೆಗೆ ಧರಿಸಿರುತ್ತಾರೆ, ಅದನ್ನು ಧರಿಸುವುದು ಕಾನೂನುಬಾಹಿರ ಅಂತ ಖಂಡಿತವಾಗಿಯೂ ಅವರಿಗೆ ಗೊತ್ತಿರುವುದಿಲ್ಲ ಎಂದು ಪ್ರಕಾಶ್ ಹೇಳಿದರು.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ವರ್ತೂರು ಸಂತೋಷ್ (Varthur Santosh) ಹುಲಿ ಉಗುರಿನ ಪೆಂಡೆಂಟ್ (tiger claw pendant) ಧರಿಸಿದ್ದ ಅಪರಾಧಕ್ಕೆ ಅರೆಸ್ಟ್ ಆಗಿರುವ ಸಂಗತಿ ರಾಜ್ಯದೆಲ್ಲೆಡೆ ತೀವ್ರವಾಗಿ ಚರ್ಚೆಯಾಗುತ್ತಿದ್ದು ಅವರ ತಾಯಿ ಮತ್ತು ಸ್ನೇಹಿತರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪ್ರಕಾಶ್ (Prakash) ಹೆಸರಿನ ಸಂತೋಷ್ ಗೆಳೆಯರೊಬ್ಬರು ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತಾಡಿ ಸಂತೋಷ್ ಅಮಾಯಕರು, ಅವರಿಗೆ ತಿಳಿಯದೆ ಹುಲಿಯುಗುರಿನ ಪೆಂಡೆಂಟ್ ಧರಿಸಿದ್ದಾರೆ ಎಂದು ಹೇಳಿದರು. ಸಂತೋಷ್ ಜಮೀನುದಾರರ ಮನೆತನದವರು, ಮೈಮೇಲೆ ಚಿನ್ನ ಮತ್ತು ಬೇರೆ ಬೇರೆ ಆಭರಣಗಳನ್ನು ಧರಿಸುವ ಹವ್ಯಾಸ ಅವರಿಗಿದೆ. ಹುಲಿಯುಗುರಿನ ಲಾಕೆಟ್ ಅವರು ಸ್ವಇಚ್ಛೆಯಿಂದ ಧರಿಸಿರಲಾರರು, ಯಾವುದಾದರೂ ಸ್ವಾಮೀಜಿ ಅಥವಾ ಗುರುಗಳ ಸಲಹೆ ಮೇರೆಗೆ ಧರಿಸಿರುತ್ತಾರೆ, ಅದನ್ನು ಧರಿಸುವುದು ಕಾನೂನುಬಾಹಿರ ಅಂತ ಖಂಡಿತವಾಗಿಯೂ ಅವರಿಗೆ ಗೊತ್ತಿರುವುದಿಲ್ಲ ಎಂದು ಪ್ರಕಾಶ್ ಹೇಳಿದರು.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 23, 2023 03:04 PM