ವೆನೆಜುವೆಲಾ ಭೂಕಂಪ: ಪುಟ್ಟ ಮಗಳ ಜೀವ ಉಳಿಸಿ ಪ್ರಾಣಬಿಟ್ಟ ಫುಟ್ಬಾಲ್ ಆಟಗಾರನ ಪತ್ನಿ
ಮುಖ್ಯಾಂಶಗಳು
- ವೆನೆಜುವೆಲಾ ಭೂಕಂಪದ ವೇಳೆ ಮನಕಲಕುವ ಘಟನೆ
- ಪುಟ್ಟ ಮಗಳ ಜೀವ ಉಳಿಸಿ ಪ್ರಾಣಬಿಟ್ಟ ಮಹಾತಾಯಿ
- ಫುಟ್ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಪತ್ನಿ ದುರ್ಮರಣ
Venezuela Quake: ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಫುಟ್ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಅವರ ಪತ್ನಿ ಆಂಡ್ರಿಯಾ ಬೆಲ್ಲೊ ಮೃತಪಟ್ಟಿದ್ದಾರೆ. ತಮ್ಮ ಒಂದು ವರ್ಷದ ಮಗಳು ಅಲಾನಾಳನ್ನು ಅವಶೇಷಗಳಡಿ ರಕ್ಷಿಸಲು ಆಂಡ್ರಿಯಾ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ತಾಯಿಯ ಮಡಿಲಲ್ಲಿ ಅಲಾನಾ ಪವಾಡ ಸದೃಶವಾಗಿ ಪಾರಾಗಿದ್ದು, ಈ ಘಟನೆ ಇಡೀ ಜಗತ್ತನ್ನೇ ಭಾವುಕಗೊಳಿಸಿದೆ.
ಕ್ಯಾರಕಾಸ್, ಜೂನ್ 26: ವೆನೆಜುವೆಲಾ ಭೂಕಂಪ ದುರಂತದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಅವರ ಪತ್ನಿ ಆಂಡ್ರಿಯಾ ಬೆಲ್ಲೊ ತಮ್ಮ ಒಂದು ವರ್ಷದ ಮಗಳು ಅಲಾನಾಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ್ದಾರೆ. ಭೂಕಂಪದಲ್ಲಿ ಅಪಾರ್ಟ್ಮೆಂಟ್ ಕುಸಿದಾಗ, ಆಂಡ್ರಿಯಾ ತಮ್ಮ ಮಗಳನ್ನು ತಬ್ಬಿಕೊಂಡು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ಹೊರತೆಗೆದಾಗ, ಆಂಡ್ರಿಯಾ ಮಗಳನ್ನು ತಬ್ಬಿದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ. ಆದರೆ, ಆಂಡ್ರಿಯಾಳ ಮುನ್ನೆಚ್ಚರಿಕೆಯಿಂದಾಗಿ ತಾಯಿಯ ಮಡಿಲಲ್ಲಿದ್ದ ಅಲಾನಾ ಪವಾಡ ಸದೃಶವಾಗಿ ಪಾರಾಗಿದ್ದಾಳೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
