ಸಿಸಿಎಲ್ ರಣಾಂಗಣ, ತೆಲುಗು ವಾರಿಯರ್ಸ್ ಮೆಂಟರ್ ವೆಂಕಟೇಶ್ ದಗ್ಗುಬಾಟಿ ಹೇಳಿದ್ದು ಹೀಗೆ
Venkatesh Daggubati: ಸಿಸಿಎಲ್ ಆರಂಭವಾಗಿದ್ದು ತಂಡಗಳು ಶಾರ್ಜಾನಲ್ಲಿ ಆರಂಭಿಕ ಪಂದ್ಯಗಳನ್ನಾಡುತ್ತಿವೆ. ಕರ್ನಾಟಕ ಬುಲ್ಡೋಜರ್ಸ್ ರೀತಿಯೇ ತೆಲುಗು ವಾರಿಯರ್ಸ್ ಸಹ ಶಕ್ತಿಶಾಲಿ ತಂಡವಾಗಿದ್ದು ಆ ತಂಡದ ಮೆಂಟರ್ ವೆಂಕಟೇಶ್ ದಗ್ಗುಬಾಟಿ ಟಿವಿ9 ಜೊತೆ ಮಾತನಾಡಿದ್ದಾರೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಶುರುವಾಗಿದೆ. ವಿವಿಧ ಚಿತ್ರರಂಗದ ಸೆಲೆಬ್ರಿಟಿಗಳು ಸಿನಿಮಾಗಳಿಂದ ಬಿಡುವು ಪಡೆದು ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಿದ್ದಾರೆ. ಕರ್ನಾಟಕ ಬುಲ್ಡೋಡಜರ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ತೆಲುಗು ವಾರಿಯರ್ಸ್ ತಂಡವೂ ಶಕ್ತಿಶಾಲಿ ತಂಡವಾಗಿದ್ದು ಅಖಿಲ್ ಅಕ್ಕಿನೇನಿ ಸೇರಿದಂತೆ ಹಲವು ಒಳ್ಳೆಯ ಆಟಗಾರರು ತಂಡದಲ್ಲಿದ್ದಾರೆ. ತೆಲುಗು ವಾರಿಯರ್ಸ್ ತಂಡಕ್ಕೆ ಸ್ಟಾರ್ ನಟ ವೆಂಕಟೇಶ್ ದಗ್ಗುಬಾಟಿ ಮೆಂಟರ್ ಆಗಿದ್ದು, ತಮ್ಮ ತಂಡದ ಬಗ್ಗೆ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ. ಶಾರ್ಜಾನಲ್ಲಿ ಆರಂಭಿಕ ಪಂದ್ಯಗಳು ನಡೆಯುತ್ತಿದ್ದು, ಅಲ್ಲಿನ ಕ್ರಿಕೆಟ್ ವಾತಾವರಣದ ಬಗ್ಗೆಯೂ ವೆಂಕಟೇಶ್ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos