ಶುಕ್ರ ಗ್ರಹ ಸಿಂಹದಿಂದ ಕನ್ಯಾ ರಾಶಿಗೆ ಪ್ರವೇಶಿಸುವ ಇಂದಿನ ರಾಶಿ ಭವಿಷ್ಯ ಇಲ್ಲಿದೆ

Updated on: Oct 09, 2025 | 6:41 AM

ಟಿವಿ9 ಡಿಜಿಟಲ್ ದಿನಭವಿಷ್ಯ ಕಾರ್ಯಕ್ರಮದಲ್ಲಿ ಅಕ್ಟೋಬರ್ 9, 2025ರ ವಿಶೇಷತೆಗಳು ಹಾಗೂ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಶುಕ್ರ ಗ್ರಹದ ಕನ್ಯಾ ರಾಶಿ ಪ್ರವೇಶ, ಹಾಸನಾಂಬಾ ದೇವಿ ದೇವಸ್ಥಾನದ ಬಾಗಿಲು ತೆರೆಯುವಂತಹ ಪ್ರಮುಖ ಘಟನೆಗಳು ಈ ದಿನ ನಡೆದಿವೆ. ಮೇಷ ರಾಶಿಯವರಿಗೆ ಕಾರ್ಯಗಳಲ್ಲಿ ಉತ್ಸಾಹ, ಆರ್ಥಿಕವಾಗಿ ಶುಭವಾಗಲಿದೆ ಎಂದು ತಿಳಿಸಿದ್ದಾರೆ.

2025ರ ಅಕ್ಟೋಬರ್ 9, ಗುರುವಾರದ ದ್ವಾದಶ ರಾಶಿಗಳ ಫಲಾಪಲ ಕುರಿತು ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ಇಲ್ಲಿ ಮಾಹಿತಿ ನೀಡಿದ್ದಾರೆ. ಈ ದಿನ ವಿಶ್ವಾಸು ನಾಮ ಸಂವತ್ಸರದ, ದಕ್ಷಿಣಾಯನ ಆಶ್ವೀಜ ಮಾಸದ ತದಿಗೆ, ಶರದ್ ಋತುವಿನ ಕೃಷ್ಣ ಪಕ್ಷ ಇದ್ದು, ಭರಣಿ ನಕ್ಷತ್ರ, ವಜ್ರ ಯೋಗ ಮತ್ತು ವಣಿಕ ಕರಣ ಇರುತ್ತದೆ. ರಾಹುಕಾಲ ಮಧ್ಯಾಹ್ನ 1:36 ನಿಮಿಷದಿಂದ 3:05 ನಿಮಿಷದ ತನಕ ಇರಲಿದೆ. ಸರ್ವಸಿದ್ಧಿ ಕಾಲ ಅಥವಾ ಶುಭಕಾಲವು ಮಧ್ಯಾಹ್ನ 12:06 ನಿಮಿಷದಿಂದ 1:35 ನಿಮಿಷದ ತನಕ ಇರುತ್ತದೆ.