ಮದುವೆಯ ಒಂದು ವಾರದ ನಂತರ ಪ್ರೀ-ವೆಡ್ಡಿಂಗ್ ಪೋಟೋ ಶೂಟ್ ಚಿತ್ರಗಳನ್ನು ಶೇರ್ ಮಾಡುತ್ತಿದ್ದಾರೆ ವಿಕ್ಕಿ-ಕತ್ರೀನಾ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 16, 2021 | 1:07 AM

ವಿಕ್ಕಿ ತನ್ನ ವಧು ಕತ್ರೀನಾ ಹಣೆಗೆ ಮುತ್ತಿಡುತ್ತಿರುವ ಫೋಟೋ ನೋಡಿದರೆ ನಿಮ್ಮ ಮನಸ್ಸು ಸಹ ರೊಮ್ಯಾಂಟಿಕ್ ಆಗಿಬಿಡುತ್ತದೆ. ಪ್ರೀ ವೆಡ್ಡಿಂಗ್ ಜೊತೆಗೆ ಮದುವೆಯ ಫೋಟೋಗಳನ್ನು ಸಹ ಕತ್ರೀನಾ ಶೇರ್ ಮಾಡಿದ್ದಾರೆ.

ಬಾಲಿವುಡ್ ಸೆಲಿಬ್ರಿಟಿ ಜೋಡಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಿ ನಾಲ್ಕು ದಿನಗಳ ಹನಿಮೂನ್ ಸಹ ಮುಗಿಸಿಕೊಂಡು ಬಂದರು, ಅದರೆ ಅವರ ಬಗ್ಗೆ ಚರ್ಚೆ ಮಾತ್ರ ಇನ್ನೂ ಮುಗಿದಿಲ್ಲ ಮಾರಾಯ್ರೇ. ಈಗಿನ ಚರ್ಚೆ ಏನು ಗೊತ್ತಾ? ಅವರು ಪ್ರೀ-ವೆಡ್ಡಿಂಗ್ ಫೋಟೋ ಶೂಟ್ನ ಇಮೇಜುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದೆ, ಈ ಸುಂದರ ಜೋಡಿಯು ಡಿಸೆಂಬರ್ 9 ರಂದು ವಿವಾಹ ಬಂಧನದಲ್ಲಿ ಬೆಸೆದುಕೊಂಡಿತು. ಆ ದಿನದಿಂದ ಅವರಿಬ್ಬರ ಮದುವೆ ಫೋಟೋಗಳು, ಅದಕ್ಕೂ ಮುಂಚಿನ ಫೋಟೋಗಳು ಒಂದೊಂದಾಗಿ, ಗುಂಪುಗುಂಪಾಗಿ ಮಾಧ್ಯಮಗಳಿಗೆ ಸಿಗುತ್ತಿವೆ.

ಪ್ರೀ-ವೆಡ್ಡಿಂಗ್ ಫೋಟೋ ಶೂಟ್​ನ ಚಿತ್ರಗಳನ್ನು ಕತ್ರೀನಾ ಮತ್ತು ವಿಕ್ಕಿ ಇಬ್ಬರೂ ತಮ್ಮ ತಮ್ಮ ಇನ್ಸ್ಟಾಗ್ರಾಮ್ ಖಾತೆಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ ಈ ಫೋಟೋಗಳ ಮೂಲಕವೇ ಅವರು ತಮ್ಮ ಲವ್ ಸ್ಟೋರಿಯನ್ನು ಹೇಳುತ್ತಿದ್ದಾರೆ ಅನಿಸುತ್ತದೆ. ಮದುವೆ-ಮುಂಚಿನ ಫೋಟೋಗಳಲ್ಲೂ ಖ್ಯಾತ ಫ್ಯಾಶನ್ ಡಿಸೈನರ್ ಸವ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿರುವ ವಸ್ತ್ರಗಳನ್ನು ಧರಿಸಿರುವ ಜೋಡಿಯು ಬಹಳ ಸೊಗಸಾಗಿ, ಮುದ್ದಾಗಿ ಕಾಣುತ್ತಿದೆ.

ಒಂದು ಪೋಸ್ಟ್​​​​ಗೆ ಅವರಿಬ್ಬರೂ ಸೇರಿ ‘ಟು ಲವ್, ಆನರ್ ಅಂಡ್ ಚೆರಿಷ್’ ಅಂತ ಶೀರ್ಷಿಕೆ ಕೊಟ್ಟಿದ್ದಾರೆ.

ವಿಕ್ಕಿ ತನ್ನ ವಧು ಕತ್ರೀನಾ ಹಣೆಗೆ ಮುತ್ತಿಡುತ್ತಿರುವ ಫೋಟೋ ನೋಡಿದರೆ ನಿಮ್ಮ ಮನಸ್ಸು ಸಹ ರೊಮ್ಯಾಂಟಿಕ್ ಆಗಿಬಿಡುತ್ತದೆ. ಪ್ರೀ ವೆಡ್ಡಿಂಗ್ ಜೊತೆಗೆ ಮದುವೆಯ ಫೋಟೋಗಳನ್ನು ಸಹ ಕತ್ರೀನಾ ಶೇರ್ ಮಾಡಿದ್ದಾರೆ.

‘ನಮ್ಮನ್ನು ಈ ಕ್ಷಣಕ್ಕಾಗಿ ಒಂದಾಗಿಸಿದ ಎಲ್ಲ ಸಂಗತಿಗಳ ಬಗ್ಗೆ ನಮ್ಮ ಹೃದಯದಲ್ಲಿ ಕೇವಲ ಪ್ರೀತಿ ಮತ್ತು ಕೃತಜ್ಞತೆ ಮಾತ್ರ ಹುದುಗಿದೆ. ನಾವಿನ್ನು ಜೊತೆಯಾಗಿ ಬದುಕಿನ ಪಯಣ ಆರಂಭಿಸುತ್ತಿರುವ ಈ ಸಮಯದಲ್ಲಿ ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳನ್ನು ಕೋರುತ್ತೇವೆ,’ ಎಂದು ಮದುವೆಯ ಒಂದು ಫೋಟೋಗೆ ಕತ್ರೀನಾ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ:  ಕೆಸರುಮಯ ರಸ್ತೆಯಲ್ಲಿ ಪುಟ್ಟ ಬಾಲಕ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ; ವಿಡಿಯೋ ವೈರಲ್