ಸರಳ ಸ್ವಭಾವದ ವಿಕ್ಕಿ ಕೌಶಲ್ ಪ್ರತಿಭೆಯ ಬಲದಿಂದಲೇ ಬಾಲಿವುಡ್​ನ ಜನಪ್ರಿಯ ನಟರಾಗಿ ಬೆಳದಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 09, 2021 | 10:27 PM

ಸರ್ದಾರ್ ಉಧಮ್ ಚಿತ್ರದಲ್ಲಿ ತನ್ನ ನಟನೆಯ ಪ್ರತಿ ಫ್ರೇಮ್ ಇರ್ಫಾನ್ ಖಾನ್ ಅವರಿಗೆ ಸಲ್ಲಿಸಿರುವ ಶ್ರದ್ಧಾಂಜಲಿ ಅಂತ ವಿಕ್ಕಿ ಹೇಳಿದ್ದಲ್ಲದೆ ತಾನು ಅವರ ಅತಿ ದೊಡ್ಡ ಅಭಿಮಾನಿ ಎಂದಿದ್ದಾರೆ.

ಎತ್ತರದ ನಿಲುವು, ಗಂಭೀರ ನಡಿಗೆ ಮತ್ತು ಚಂಚಲ ಕಣ್ಣುಗಳು, ಪ್ರತಿಭಾವಂತ ನಟ ವಿಕ್ಕಿ ಕೌಶಲ್ ಅವರನ್ನು ಹೀಗೆ ವರ್ಣಿಸಬಹುದೇನೋ. ನಟನೆಯ ವಿಷಯದಲ್ಲಿ ಮಾತ್ರ ವಿಕ್ಕಿ ಅಸಾಮಾನ್ಯರು. ವೃತ್ತಿಬದುಕಿನೆಡೆ ಅವರಿಗಿರುವ ನಿಷ್ಠೆ ಮತ್ತು ಬದ್ಧತೆಯೂ ಅನನ್ಯವಾದದ್ದು. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದಲ್ಲಿ ಅವರು ನೀಡಿದ ಅಭಿನಯ ಮೆಚ್ಚದವರಿಲ್ಲ. ವಿಕ್ಕಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಇದೇ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ. ಅವರ ಬದ್ಧತೆ ಕುರಿತು ಯಾಕೆ ಉಲ್ಲೇಖಿಸಬೇಕಾಗಿದೆ ಅಂದರೆ, ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾಗಾಗಿ ಅವರು 5 ತಿಂಗಳು ಕಾಲ ಮಿಲಿಟರಿ ತರಬೇತಿ ಪಡೆದರು ಮತ್ತು ಮಾರ್ಷಲ್ ಆರ್ಟ್ಸ್ನಲ್ಲಿ ಪ್ರಾವೀಣ್ಯತೆ ಸಾಧಿಸಿದರು. ಸಂಜಯ ದತ್ ಅವರ ಬದುಕಿನ ಮೇಲೆ ಆಧಾರಿತ ಸಂಜು ಚಿತ್ರದಲ್ಲಿ ಕಮ್ಲಿಯ ಪಾತ್ರಕ್ಕೆ ವಿಕ್ಕಿಯ ಹಾಗೆ ಬೇರೆ ಯಾವುದೇ ನಟ ನ್ಯಾಯ ಒದಗಿಸುವುದು ಸಾಧ್ಯವಿರಲಿಲ್ಲ. ನಿಸ್ಸಂದೇಹವಾಗಿ ವಿಕ್ಕಿ ಅಸಾಧಾರಣ ಪ್ರತಿಭಾವಂತ ನಟ.

ವಿಕ್ಕಿಯ ಹೊಸ ಚಿತ್ರ ಸರ್ದಾರ್ ಉಧಮ್ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಅಸಲಿಗೆ ದಿವಂಗತ ಇರ್ಫಾನ್ ಖಾನ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ದಾರ್ ಉಧಮ್ ಪ್ರಾಜೆಕ್ಟ್ ತಯಾರಾಗಿತ್ತು. ಅದರೆ ಇರ್ಫಾನ್ ಕ್ಯಾನ್ಸರ್ನೊಂದಿಗೆ ಹೋರಾಡಿ ಅಕಾಲಿಕ ಮರಣವನ್ನಪ್ಪಿದರು. ಅವರ ಸ್ಥಾನದಲ್ಲಿ ಯಾರನ್ನು ಆರಿಸುವುದು ಎಂಬ ಯೋಚನೆಯಲ್ಲಿದ್ದ ನಿರ್ದೇಶಕ ಶೂಜಿತ್ ಸರ್ಕಾರ್ ಅವರಿಗೆ ಹೊಳೆದಿದ್ದು ವಿಕ್ಕಿ. ದಿ ಕಪಿಲ್ ಶರ್ಮ ಶೋನಲ್ಲಿ ಈ ವಾರ ಕಾಣಿಸಿಕೊಂಡಿರುವ ವಿಕ್ಕಿ ಮತ್ತು ಸರ್ಕಾರ್ ಇರ್ಫಾನ್ ಬಗ್ಗೆ ಮಾತಾಡಿದ್ದಾರೆ.

ಸರ್ದಾರ್ ಉಧಮ್ ಚಿತ್ರದಲ್ಲಿ ತನ್ನ ನಟನೆಯ ಪ್ರತಿ ಫ್ರೇಮ್ ಇರ್ಫಾನ್ ಖಾನ್ ಅವರಿಗೆ ಸಲ್ಲಿಸಿರುವ ಶ್ರದ್ಧಾಂಜಲಿ ಅಂತ ವಿಕ್ಕಿ ಶೋನಲ್ಲಿ ಹೇಳಿದ್ದಲ್ಲದೆ ತಾನು ಅವರ ಅತಿ ದೊಡ್ಡ ಅಭಿಮಾನಿ ಎಂದಿದ್ದಾರೆ.

ನಿಜ ಜೀವನದಲ್ಲಿ ವಿಕ್ಕಿ ಬಹಳ ಸಿಂಪಲ್ ವ್ಯಕ್ತಿ, ಅವರು ಉಡುಗೆ ತೊಡುಗೆಯೂ ಅಷ್ಟೇ ಸರಳ ಅದರೆ ಅಪೀಲಿಂಗ್. ಎಲ್ಲ ಬಾಲಿವುಡ್ ನಟರಂತೆ ಇವರಿಗೂ ಜೀನ್ಸ್ ಮತ್ತು ಟೀ-ಶರ್ಟ್ ಬಹಳ ಇಷ್ಟ. ಬಾಲಿವುಡ್ ಗಾಸಿಪ್ ಕಾಲಂಗಳನ್ನು ನಂಬುವುದಾದರೆ ಸುಪ್ರಸಿದ್ಧ ನಟಿ ಕತ್ರೀನಾ ಕೈಫ್ ಜೊತೆ ವಿಕ್ಕಿ ಸ್ನೇಹಕ್ಕೂ ಮಿಗಿಲಾದ ಬಾಂಧವ್ಯ ಹೊಂದಿದ್ದಾರೆ. ಮದುವೆವರೆಗೆ ಮಾತು ಮುಂದುವರಿದಿದೆಯಂತೆ.

ಹಾಗೆ ನೋಡಿದರೆ, 33-ವರ್ಷ ವಯಸ್ಸಿನ ವಿಕ್ಕಿ ಕತ್ರೀನಾಗಿಂತ 5 ವರ್ಷ ಚಿಕ್ಕವರು!

ಇದನ್ನೂ ಓದಿ: Sakath: ಮೋಡಿ ಮಾಡುವಂತಿದೆ ಗಣೇಶ್- ನಿಶ್ವಿಕಾ ಅಭಿನಯದ ‘ಸಖತ್’ ಚಿತ್ರದ ಹಾಡು; ವಿಡಿಯೋ ಸಾಂಗ್ ಇಲ್ಲಿದೆ