Video: ಇವರೇ ನಿಜವಾದ ಹೀರೋ, ಕಾರೊಳಗೆ ಸಿಲುಕಿದ್ದ ಮಗುವನ್ನು ಮೊಬೈಲ್ ಬಳಸಿ ರಕ್ಷಿಸಿದ್ಹೇಗೆ ನೋಡಿ
ಕಾರಿನೊಳಗೆ ಲಾಕ್ ಆಗಿದ್ದ ಮಗುವನ್ನು ವ್ಯಕ್ತಿಯೊಬ್ಬರು ಮೊಬೈಲ್ ಬಳಸಿ ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಸಮಯಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್‌ನಲ್ಲಿರುವ ಸ್ವೀಟ್ ಅಂಗಡಿಗೆ ಮಗುವಿನ ಜತೆ ಪೋಷಕರು ಬಂದಿದ್ದರು. ಕಾರಿನ ಕೀ ಕಾರೊಳಗೆ ಇತ್ತು ಹೇಗೋ ಬಾಲಕಿ ಕಾರೊಳಗೆ ಲಾಕ್ ಆಗಿದ್ದಳು. ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಸುಲ್ತಾನಾಬಾದ್, ಆಗಸ್ಟ್ 18: ಕಾರಿನೊಳಗೆ ಲಾಕ್ ಆಗಿದ್ದ ಮಗುವನ್ನು ವ್ಯಕ್ತಿಯೊಬ್ಬರು ಮೊಬೈಲ್ ಬಳಸಿ ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಸಮಯಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್‌ನಲ್ಲಿರುವ ಸ್ವೀಟ್ ಅಂಗಡಿಗೆ ಮಗುವಿನ ಜತೆ ಪೋಷಕರು ಬಂದಿದ್ದರು. ಕೀ ಕಾರೊಳಗೆ ಇತ್ತು ಮಗುವನ್ನು ಬಿಟ್ಟು ಎಲ್ಲರೂ ಕೆಳಗಿಳಿದಿದ್ದರು. ಆದರೆ ಕಾರು ಆಟೊಮೆಟಿಕ್ ಆಗಿ ಲಾಕ್ ಆಗಿದೆ.
ಮಗು ಒಳಗಿದೆ ಕಾರು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಆಗ ದೇವರಂತೆ ಬಂದ ವ್ಯಕ್ತಿಯೊಬ್ಬ ಮಗುವಿಗೆ ಕಾರಿನ ಲಾಕ್ ತೆರೆಯುವುದು ಹೇಗೆ ಎಂಬ ವಿಡಿಯೋವನ್ನು ಮೊಬೈಲ್ನಲ್ಲಿ ತೋರಿಸಿ, ಕಾರಿನ ಲಾಕ್ ತೆರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಮಗು ಸುರಕ್ಷಿತವಾಗಿ ಹೊರಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕುಟುಂಬವು ತಮ್ಮ ಕಾರನ್ನು ಸಿಹಿತಿಂಡಿ ಅಂಗಡಿಯ ಹೊರಗೆ ನಿಲ್ಲಿಸಿದಾಗ, ಕೀಲಿಗಳು ಒಳಗೆ ಇದ್ದು, ತಪ್ಪಾಗಿ ಬಾಗಿಲು ಮುಚ್ಚಿದ್ದರು. ಬಾಲಕಿ ಒಳಗೇ ಇದ್ದಳು. ಆದರೆ ಕಾರು ಸ್ವಲ್ಪ ಸಮಯದ ಬಳಿಕ ತನ್ನಿಂತಾನೆ ಲಾಕ್ ಆಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




