Video: ದಿಢೀರನೆ ಸುರಿದ ಭಾರೀ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ!
Chikkamagaluru News: ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ವರುಣದೇವ ಇಂದು ಕಾಫಿನಾಡು, ಮಲೆನಾಡು ಭಾಗದ ಹಲವೆಡೆ ಒಂದು ಗಂಟೆವರೆಗೆ ನಿರಂತರವಾಗಿ ಭಾರೀ ಮಳೆ ಸುರಿದಿದೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ದಿಢೀರನೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಚಿಕ್ಕಮಗಳೂರು, ಆಗಸ್ಟ್ 10: ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ವರುಣದೇವ ಇಂದು ಕಾಫಿನಾಡು, ಮಲೆನಾಡು ಭಾಗದ ಹಲವೆಡೆ ಒಂದು ಗಂಟೆವರೆಗೆ ನಿರಂತರವಾಗಿ ಭಾರೀ ಮಳೆ (Heavy rain) ಸುರಿದಿದೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ದಿಢೀರನೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಯಪುರ, ಬಾಳೆಹೊನ್ನೂರು, ಮೇಗುಂದ ಭಾಗದಲ್ಲಿ ಭಾರೀ ಮಳೆಯಿಂದಾಗಿ ನೀರು ಉಕ್ಕಿ ಹರಿದಿವೆ. ಇನ್ನು ಗ್ರಾಮೀಣ ಭಾಗದ ರಸ್ತೆಗಳು ಜಲಾವೃತವಾಗಿದ್ದು ಜನರು ಪರದಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.