AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ದೇವನಹಳ್ಳಿಯ ಮತಗಟ್ಟೆ ಬಳಿ ಕಾರ್ಯಕರ್ತನೊಬ್ಬ ಮತದಾರರಿಗೆ ನಿರ್ಭೀತಿಯಿಂದ ಹಣ ಹಂಚಿದ ವಿಡಿಯೋ ವೈರಲ್

Karnataka Assembly Polls: ದೇವನಹಳ್ಳಿಯ ಮತಗಟ್ಟೆ ಬಳಿ ಕಾರ್ಯಕರ್ತನೊಬ್ಬ ಮತದಾರರಿಗೆ ನಿರ್ಭೀತಿಯಿಂದ ಹಣ ಹಂಚಿದ ವಿಡಿಯೋ ವೈರಲ್

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:May 11, 2023 | 5:11 PM

ಹಣ ಹಂಚುತ್ತಿರುವ ಭೂಪ ಅವರೊಂದಿಗೆ ಮಾತಾಡಿ ಮೊದಲು ಪುರುಷನಿಗೆ ಹಣ ನೀಡಲು ಪ್ರಯತ್ನಿಸುತ್ತಾನೆ. ಅವನು ತೆಗೆದುಕೊಳ್ಳಲು ನಿರಾಕರಿಸಿದಾಗ ಮಹಿಳೆಗೆ ನೀಡುತ್ತಾನೆ.

ದೇವನಹಳ್ಳಿ: ಈ ವ್ಯಕ್ತಿಯನ್ನು ನೋಡಿ, ನಮ್ಮ ಮೂಲಗಳ ಪ್ರಕಾರ ಅವನು ಜೆಡಿಎಸ್ (JDS) ಪಕ್ಷದವನು. ಮಹಾನುಭಾವನಿಗೆ ಪೊಲೀಸರ, ಎದುರಾಳಿ ಪಕ್ಷಗಳ ಹೆದರಿಕೆಯೇ ಇಲ್ಲ. ಮತ ಚಲಾಯಿಸಲು ಬರುವ ಜನರಿಗೆ ನಿರ್ಭಯ, ನಿರ್ಭೆಡೆಯಿಂದ ಹಣ ಹಂಚುತ್ತಿದ್ದಾನೆ. ಈ ವಿಡಿಯೋ ಸಾಮಾಜಿನ ಜಾಲತಾಣಗಳಲ್ಲಿ ವೈರಲ್ (viral) ಅಗಿದೆ. ಅವನು ನಿಂತ ಸ್ಥಳಕ್ಕೆ ಒಂದು ಉತ್ತರ ಭಾರತದ (north India) ಅಥವಾ ನೇಪಾಳದಿಂದ ವಲಸೆ ಬದಿರಬಹುದಾದ ಜೋಡಿ ಬರುತ್ತದೆ. ಅವರು ದಂಪತಿಯೋ ಅಥವಾ ಸಹೋದರ-ಸಹೋದರಿಯೋ ಅಂತ ಗೊತ್ತಿಲ್ಲ. ಹಣ ಹಂಚುತ್ತಿರುವ ಭೂಪ ಅವರೊಂದಿಗೆ ಮಾತಾಡಿ ಮೊದಲು ಪುರುಷನಿಗೆ ಹಣ ನೀಡಲು ಪ್ರಯತ್ನಿಸುತ್ತಾನೆ. ಅವನು ತೆಗೆದುಕೊಳ್ಳಲು ನಿರಾಕರಿಸಿದಾಗ ಮಹಿಳೆಗೆ ನೀಡುತ್ತಾನೆ. ಆಕೆ ನಗುತ್ತಾ ಹಣ ಸ್ವೀಕರಿಸುತ್ತಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 10, 2023 03:53 PM