Video: ಮಹಾಕುಂಭ ಮೇಳದಲ್ಲಿ ಸಿದ್ಧವಾಗುತ್ತಿದ್ದ ಅಡುಗೆಗೆ ಬೂದಿ ಹಾಕಿದ ಪೊಲೀಸ್
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಕಾರ್ಯಕ್ರಮದ ವೇಳೆ ಸಿದ್ಧಪಡಿಸಲಾಗುತ್ತಿದ್ದ ಅಡುಗೆಗೆ ಪೊಲೀಸ್ ಒಬ್ಬರು ಬೂದಿ ಹಾಕಿರುವ ಘಟನೆ ವರದಿಯಾಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆ ವೈರಲ್ ಆಗುತ್ತಿದ್ದಂತೆ ಬ್ರಿಜೇಶ್ ಕುಮಾರ್ ತಿವಾರಿಯನ್ನು ಕೂಡಲೇ ಅಮಾನತುಗೊಳಿಸಲಾಗಿದೆ. ಡಿಸಿಪಿ (ಗಂಗಾ ನಗರ) ಕುಲದೀಪ್ ಸಿಂಗ್ ಗುಣವತ್ ಅವರು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿದ್ದಾರೆ ಮತ್ತು ಇಲಾಖಾ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಕಾರ್ಯಕ್ರಮದ ವೇಳೆ ಸಿದ್ಧಪಡಿಸಲಾಗುತ್ತಿದ್ದ ಅಡುಗೆಗೆ ಪೊಲೀಸ್ ಒಬ್ಬರು ಬೂದಿ ಹಾಕಿರುವ ಘಟನೆ ವರದಿಯಾಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆ ವೈರಲ್ ಆಗುತ್ತಿದ್ದಂತೆ ಬ್ರಿಜೇಶ್ ಕುಮಾರ್ ತಿವಾರಿಯನ್ನು ಕೂಡಲೇ ಅಮಾನತುಗೊಳಿಸಲಾಗಿದೆ. ಡಿಸಿಪಿ (ಗಂಗಾ ನಗರ) ಕುಲದೀಪ್ ಸಿಂಗ್ ಗುಣವತ್ ಅವರು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿದ್ದಾರೆ ಮತ್ತು ಇಲಾಖಾ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಈ ವಿಡಿಯೋವನ್ನು ಮಾಜಿ ಸಿಎಂ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಶೇರ್ ಮಾಡಿದ್ದಾರೆ. ಮಹಾಕುಂಭಕ್ಕೆ ಬರುವವರಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಆದರೆ ಈ ಒಳ್ಳೆಯ ಕಾರ್ಯ ಕೆಲವು ರಾಜಕೀಯ ದ್ವೇಷದಿಂದ ಹಾಳಾಗುತ್ತಿದೆ, ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ