KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್: ದಾರಿ ಬಿಡದೆ ಹುಚ್ಚಾಟ
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ ಕೆಎಸ್ಆರ್ಟಿಸಿ ಬಸ್ ಮುಂದೆ ಡೆಲಿವರಿ ಬಾಯ್ ಅಪಾಯಕಾರಿ ರೀತಿಯಲ್ಲಿ ಬೈಕ್ ಓಡಿಸಿದ ಘಟನೆ ವೈರಲ್ ಆಗಿದೆ. ಬಸ್ ಚಾಲಕನ ಮನವಿಗೂ ಕಿವಿಗೊಡದೆ ರಾಶ್ ಡ್ರೈವ್ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ, ಮಾರ್ಚ್ 03: ಕೆಎಸ್ಆರ್ಟಿಸಿ ಬಸ್ಗೆ ದಾರಿ ಬಿಡದೆ ಅದರ ಮುಂದೆಯೇ ವೇಗವಾಗಿ ಅಡ್ಡಾದಿಡ್ಡಿ ಡೆಲಿವರಿ ಬಾಯ್ (Delivery boy) ಬೈಕ್ ಓಡಿಸಿರುವಂತಹ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರ ಕ್ರಾಸ್ ಬಳಿ ಘಟನೆ ನಡೆದಿದೆ. ಬೈಲೂರು ಗ್ರಾಮದ ಪ್ರಕಾಶ್ ಹುಚ್ಚಾಟ ಮೆರೆದ ಡೆಲಿವರಿ ಬಾಯ್. ಇದರ ವಿಡಿಯೋ ಕೂಡ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕುರುಗೋಡು ಪೊಲೀಸರು ಯುವಕ ಮೇಲೆ ಕೇಸ್ ಹಾಕಿ ಬೈಕ್ ಸೀಜ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.