ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದಿರುವುದು ನಾಚಿಕೆಗೇಡಿನ ಸಂಗತಿ:ಗಾಯಕಿ ಚಿನ್ಮಯಿ ಶ್ರೀಪಾದ್

|

Updated on: May 01, 2024 | 5:12 PM

"ಮಗನ ಈ ಹೀನಾ ಕೃತ್ಯವನ್ನು ಮನೆಯವರಿಗೂ ಗೊತ್ತಿತ್ತು. ಆದ್ರೂ ಮುಚ್ಚಿಟ್ಟಿದ್ದಾರೆ. ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದಿರುವುದು ನಾಚಿಕೆಗೇಡಿನ ಸಂಗತಿ" ಎಂದು ಪ್ರಜ್ವಲ್​​ ರೇವಣ್ಣ ಕುಟುಂಬದ ವಿರುದ್ಧ ಗಾಯಕಿ ಚಿನ್ಮಯಿ ಟ್ವೀಟ್ ಮಾಡಿದ್ದಾರೆ.

ಪ್ರಜ್ವಲ್‌ ರೇವಣ್ಣ(Prajwal Revanna) ಲೈಂಗಿಕ ದೌರ್ಜನ್ಯ ಕೇಸ್‌ನ ಬೆನ್ನಲ್ಲೇ ಸಿನಿಮಾ ಮಂದಿಯಿಂದಲೂ ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇದೀಗ ಗಾಯಕಿ ಚಿನ್ಮಯಿ ಶ್ರೀಪಾದ್​ ತೀವ್ರವಾಗಿ ಖಂಡಿಸಿದ್ದಾರೆ. ಪ್ರಜ್ವಲ್​​ ರೇವಣ್ಣ ಕುಟುಂಬದ ವಿರುದ್ಧ ಗಾಯಕಿ ಚಿನ್ಮಯಿ ಟ್ವೀಟ್ ಮಾಡಿದ್ದಾರೆ. ಕೃತ್ಯದ ಬಗ್ಗೆ ಅವರ ಮನೆಯವರಿಗೂ ಗೊತ್ತಿತ್ತು. ಆದ್ರೂ ಮಗನ ಈ ಹೀನಾ ಕೃತ್ಯವನ್ನು ಮುಚ್ಚಿಟ್ಟಿದ್ದಾರೆ. ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್​ ಮಾಡಿದ್ದಾರೆ. ಈ ಹಿಂದೆ ನಟಿ ಪೂನಂ ಕೌರ್ ಹಾಗೂ ತೆಲುಗು ನಟಿ ರಶ್ಮಿ ಗೌತಮ್ ವಿರೋಧ ವ್ಯಕ್ತಪಡಿಸಿದ್ದರು. “ಮಹಿಳೆ ಹಸಿದಾಗ ಬಾಯಿಗೆ ಅನ್ನ ಕೊಡಿ, ಅದನ್ನಲ್ಲ” ಎಂದು ಖ್ಯಾತ ಬ್ರಿಟನ್​​​ ಲೇಖಕಿ ರಾಷೆಲ್ ​​ಮೊರಾನ್ ಅವರ ಸಂದೇಶವನ್ನು ಹಂಚಿಕೊಂಡಿದ್ದ ನಟಿ ರಶ್ಮಿ ಗೌತಮ್. ಆಪಾದಿತನಿಂದ ತೊಂದರೆಗೆ ಒಳಗಾಗಿರುವ ಮಹಿಳೆಯರಿಗೆ/ಹುಡುಗಿಯರಿಗೆ ನ್ಯಾಯ ಸಿಗುತ್ತೋ ಬಿಡುತ್ತೋ, ಈ ವಿಚಾರವು ಸಂಪೂರ್ಣವಾಗಿ ರಾಜಕೀಯ ಬಣ್ಣ ಬಳೆದುಕೊಂಡಾಗಿದೆ. ​

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌: ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ, ಪತ್ರದಲ್ಲೇನಿದೆ?