Loading video

Video: ನೋಯ್ಡಾ: ಲಿಫ್ಟ್​ ಒಳಗೆ ನಾಯಿ ತರಬೇಡಿ ಭಯ ಆಗುತ್ತೆ ಎಂದು ಬೇಡಿಕೊಂಡ ಬಾಲಕನ ಧರಧರನೆ ಎಳೆದು ಹೊರಹಾಕಿದ ಮಹಿಳೆ

|

Updated on: Feb 20, 2025 | 9:09 AM

ಸಾಮಾನ್ಯವಾಗಿ ಮಕ್ಕಳಿಗೆ ನಾಯಿಗಳೆಂದರೆ ಭಯ ಇದ್ದೇ ಇರುತ್ತದೆ, ಅದರಲ್ಲೂ ಲಿಫ್ಟ್​ ಒಳಗೆಂದರೆ ತುಸು ಹೆಚ್ಚು. ನೋಯ್ಡಾದ ಅಪಾರ್ಟ್​ಮೆಂಟ್​ವೊಂದರ ಲಿಫ್ಟ್​ನಲ್ಲಿ ಮಹಿಳೆ ನಾಯಿಯ ಜತೆ ಬಂದಿದ್ದಕ್ಕೆ ಹೆದರಿದ ಬಾಲಕ ದಯವಿಟ್ಟು ನಾಯಿಯನ್ನು ಒಳಗೆ ಕರೆದುಕೊಂಡು ಬರಬೇಡಿ ಭಯ ಆಗುತ್ತೆ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ. ಆದರೂ ಒಂದಿಷ್ಟು ಮಾನವೀಯತೆ ತೋರದೆ ನಾಯಿಯನ್ನು ಲಿಫ್ಟ್​ ಒಳಗೆ ಹತ್ತಿಸಿಕೊಂಡಿದ್ದಷ್ಟೇ ಅಲ್ಲದೆ 8 ವರ್ಷದ ಬಾಲಕನನ್ನು ಲಿಫ್ಟ್​ನಿಂದ ಧರಧರನೆ ಎಳೆದು ಹೊರಗೆ ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ.

ಸಾಮಾನ್ಯವಾಗಿ ಮಕ್ಕಳಿಗೆ ನಾಯಿಗಳೆಂದರೆ ಭಯ ಇದ್ದೇ ಇರುತ್ತದೆ, ಅದರಲ್ಲೂ ಲಿಫ್ಟ್​ ಒಳಗೆಂದರೆ ತುಸು ಹೆಚ್ಚು. ನೋಯ್ಡಾದ ಅಪಾರ್ಟ್​ಮೆಂಟ್​ವೊಂದರ ಲಿಫ್ಟ್​ನಲ್ಲಿ ಮಹಿಳೆ ನಾಯಿಯ ಜತೆ ಬಂದಿದ್ದಕ್ಕೆ ಹೆದರಿದ ಬಾಲಕ ದಯವಿಟ್ಟು ನಾಯಿಯನ್ನು ಒಳಗೆ ಕರೆದುಕೊಂಡು ಬರಬೇಡಿ ಭಯ ಆಗುತ್ತೆ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ.

ಆದರೂ ಒಂದಿಷ್ಟು ಮಾನವೀಯತೆ ತೋರದೆ ನಾಯಿಯನ್ನು ಲಿಫ್ಟ್​ ಒಳಗೆ ಹತ್ತಿಸಿಕೊಂಡಿದ್ದಷ್ಟೇ ಅಲ್ಲದೆ 8 ವರ್ಷದ ಬಾಲಕನನ್ನು ಲಿಫ್ಟ್​ನಿಂದ ಧರಧರನೆ ಎಳೆದು ಹೊರಗೆ ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ. ಗೌರ್ ಸಿಟಿ 2 ಸೊಸೈಟಿಯ 12 ನೇ ಅವೆನ್ಯೂದ ಲಿಫ್ಟ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಕೋಪಗೊಂಡ ನಿವಾಸಿಗಳು ಹೊರಗೆ ಮಹಿಳೆಯ ವಿರುದ್ಧ ಪ್ರತಿಭಟನೆ ನಡೆಸಿ, ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸೊಸೈಟಿಯ ನಿವಾಸಿ ಎಂಟು ವರ್ಷದ ಬಾಲಕ ಟ್ಯೂಷನ್‌ನಿಂದ ಹಿಂತಿರುಗಿ ತನ್ನ ಫ್ಲಾಟ್‌ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ನಾಯಿ ಕೊರಳಿಗೆ ಬೆಲ್ಟ್​ ಕೂಡ ಇಲ್ಲದಿದ್ದಕ್ಕೆ ಬಾಲಕ ಮತ್ತಷ್ಟು ಭಯಗೊಂಡಿದ್ದ. ಈ ಹಿಂದೆಯೂ ಮಹಿಳೆ ನಾಯಿಗಳ ವಿಷಯವಾಗಿ ಜಗಳವಾಡಿದ್ದಳು ಎಂದು ಕೆಲವು ನಿವಾಸಿಗಳು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ