Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡೋದು ತಡವಾಗಿದೆ, ಆದಷ್ಟು ಬೇಗ ರಿಲೀಸ್ ಮಾಡುತ್ತೇವೆ: ಜಿ ಪರಮೇಶ್ವರ್

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡೋದು ತಡವಾಗಿದೆ, ಆದಷ್ಟು ಬೇಗ ರಿಲೀಸ್ ಮಾಡುತ್ತೇವೆ: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 20, 2025 | 11:21 AM

ಒಂದು ಸರ್ಕಾರ ಹಣಕಾಸಿನ ವ್ಯವಹಾರವನ್ನು ನಿಭಾಯಸುವುದು ಸುಲಭದ ಕೆಲಸವಲ್ಲ, ಹಿಂದಿನ ಸರ್ಕಾರ ಲಕ್ಷಾಂತರ ಕೋಟಿ ರೂ. ಗಳ ಬಿಲ್ ಗಳನ್ನು ಬಾಕಿಯಿಟ್ಟಿತ್ತು, ತಮ್ಮ ಸರ್ಕಾರ ಅವುಗಳನ್ನೆಲ್ಲ ಕ್ಲೀಯರ್ ಮಾಡುತ್ತಾ ಬಂದಿದೆ, ಓವರ್ ಡ್ರಾಫ್ಟಿಂಗ್ ಸೌಲಭ್ಯವನ್ನು ಬಳಸಿಕೊಳ್ಳದೆ ಬಿಲ್​ಗಳ ಪಾವತಿಯಾಗಿದೆ, ಫಲಾನುಭವಿಗಳಿಗೆ ತಡವಾದರೂ ಹಣ ಬಿಡುಗಡೆ ಮಾಡಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಸರ್ಕಾರ ನಿಯಮಿತವಾಗಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಗೃಹ ಸಚಿವ ಜಿ ಪರಮೇಶ್ವರ್ ಬೇರೆ ಸಚಿವರ ಹಾಗೆ ಉದ್ವೇಗಕ್ಕೊಳಗಾಗದೆ ಉತ್ತರಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಒಂದೆರಡು ಇಲಾಖೆಗಳಲ್ಲಿ ಹಣ ಬಿಡುಗಡೆ ಮಾಡುವುದು ತಡವಾಗಿದೆ, ಇಲ್ಲ ಅಂತೇನೂ ಸರ್ಕಾರ ಹೇಳುತ್ತಿಲ್ಲ, ಚುನಾವಣೆಯಲ್ಲಿ ವಾಗ್ದಾನ ಮಾಡಿದ ಹಾಗೆ ಗ್ಯಾರಂಟಿ ಯೋಜನೆಗಳನ್ನು ಫ್ಲ್ಯಾಗ್​ಶಿಪ್ ಯೋಜನೆಗಳ ಹಾಗೆ ಅನುಷ್ಠಾನಗೊಳಿಸಿದ್ದೇವೆ, ಆಗಿರುವ ವಿಳಂಬವನ್ನು ಸರಿಪಡಿಸಿ ಹಣವನ್ನು ಬಿಡುಗಡೆ ಮಾಡುತ್ತೇವೆಂದು ಖುದ್ದು ಮುಖ್ಯಮಂತ್ರಿಯವರೇ ಹೇಳಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೊಸ ಕಾಂಗ್ರೆಸ್ ಭವನ ನಿರ್ಮಾಣದ ಹಿನ್ನೆಲೆಯಲ್ಲಿ ಎಐಸಿಸಿಯನ್ನು ಪುನಾರಚನೆ ಮಾಡುವ ಆಸೆ ಖರ್ಗೆಗಿದೆ: ಪರಮೇಶ್ವರ್