Bidar News: ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಬಸವನ ವಿಗ್ರಹ ಹಾಲು-ನೀರು ಕುಡಿಯುವ ವಿಡಿಯೋಗಳು ವೈರಲ್!
ಬೀದರ್ ಜಿಲ್ಲೆಯ ಕೇವಲ ಒಂದು ಗ್ರಾಮದಿಂದ ಈ ವಿದ್ಯಮಾನ ಕೇಳಿಬಂದಿಲ್ಲ. ಹಲವಾರು ಜಿಲ್ಲೆಗಳಲ್ಲಿ ಕೌತುಕದ ಸಂಗತಿ ಸಂಭವಿಸುತ್ತಿದೆಯಂತೆ.
ಬೀದರ್: ಹಿಂದೆಯೂ ಇಂಥದೊಂದು ಸುದ್ದಿ ಸದ್ದು ಮಾಡಿತ್ತು. ಬಸವನ ವಿಗ್ರಹ ನಂದಿ (Nandi) ಹಾಲಿ ಕುಡಿದ ಸುದ್ದಿಯನ್ನು ನೀವು ಕೇಳಿರಬಹುದು. ಜಿಲ್ಲೆಯಲ್ಲಿ ಈಗ ಈ ಸುದ್ದಿ ಕಾಳ್ಳಿಚ್ಚಿನಂತೆ ಹರಡುತ್ತಿದೆ. ಅದರಲ್ಲಿ ಎಷ್ಟು ಸತ್ಯಾಂಶವಿದೆ ಅಂತ ಖಚಿತಪಡಿಸಿಕೊಳ್ಳಬೇಕಿದೆ. ಜಿಲ್ಲೆಯ ಕೇವಲ ಒಂದು ಗ್ರಾಮದಿಂದ ಈ ವಿದ್ಯಮಾನ ಕೇಳಿಬಂದಿಲ್ಲ. ಹಲವಾರು ಜಿಲ್ಲೆಗಳಲ್ಲಿ ಕೌತುಕದ ಸಂಗತಿ ಸಂಭವಿಸುತ್ತಿದೆಯಂತೆ. ಈ ವಿಡಿಯೋ ನೋಡಿ ಕೆಲವರು ನಂದಿ ವಿಗ್ರಹಕ್ಕೆ ಹಾಲು ಮತ್ತು ನೀರು ಕುಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಹಿಳೆಯರು ಚಮಚೆಯಿಂದ ಹಾಲು ಮತ್ತು ನೀರನ್ನು ಬಸವನ ಬಾಯಿ ಬಳಿ ಇಡುತ್ತಿದ್ದಾರೆ. ಬೀದರ್ ತಾಲ್ಲೂಕಿನ (Bidar taluk) ತಾಲೂಕಿನ ಧೊಮಸಾಪುರ, ಮರಕುಂದ, ಚಿಟಗುಪ್ಪಾತಾಲ್ಲೂಕಿನ (Chitguppa) ನಿರ್ಣಾ, ಮಂಗಲಗಿ ಹಾಗೂ ಬಸವಕಲ್ಯಾಣ ತಾಲೂಕಿನ (Basava Kalyan) ನಾರಾಯಣಪುರ ಸೇರಿದಂತೆ ಹಲವೆಡೆ ಬಸವನ ವಿಗ್ರಹ ಹಾಲು ಕುಡಿಯುವ ವಿಡಿಯೋಗಳು ವೈರಲ್ ಆಗುತ್ತಿವೆ. ಇದು ಜನರ ಭಕ್ತಿಯ ವಿಷಯವಾಗಿರುವುದರಿಂದ ವೈಜ್ಞಾನಿಕ ಚೌಕಟ್ಟಿನೊಳಗ ಇಡಲಾಗದು. ವಿಜ್ಞಾನವೇ ಬೇರೆ, ಭಕ್ತಿಯೇ ಬೇರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ