ಪಥ ಬದಲಿಸಿ ಗವಿಗಂಗಾಧರೇಶ್ವರನಿಗೆ ನಮಿಸಿದ ಸೂರ್ಯ, ಇದೇ ಮೊದಲ ಬಾರಿಗೆ 3 ನಿಮಿಷ 12 ಸೆಕೆಂಡ್‌ ಸ್ಪರ್ಶ!

ಬೆಂಗಳೂರಿನ ಶ್ರೀ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸುವ ಘಳಿಗೆ ಭಾನುವಾರ ಸಂಜೆ ನಡೆಯಿತು.

ಪಥ ಬದಲಿಸಿ ಗವಿಗಂಗಾಧರೇಶ್ವರನಿಗೆ ನಮಿಸಿದ ಸೂರ್ಯ, ಇದೇ ಮೊದಲ ಬಾರಿಗೆ 3 ನಿಮಿಷ 12 ಸೆಕೆಂಡ್‌ ಸ್ಪರ್ಶ!
ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 15, 2023 | 7:09 PM

ಬೆಂಗಳೂರು: ಇಂದು ನಾಡಿಗೆ ಸಂಕ್ರಾಂತಿ ಸಂಭ್ರಮ. ಜೊತೆಗೆ ಸೂರ್ಯನು ದಕ್ಷಿಣಾಯನದಿಂದ ಪಥ ಬದಲಿಸಿ ಉತ್ತರಾಯಣ ಚಲನೆಗೆ ತೊಡಗುವ ದಿನ. 2023 ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು (Sankranti Festival) ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ತನ್ನ ಪಥ ಬದಲಿಸುವಾಗ ಸೂರ್ಯನ ಕಿರಣಗಳು ಬೆಂಗಳೂರಿನ ಬಸವನಗುಡಿಯ ಗವಿಗಂಗಾಧರೇಶ್ವರನ(Gavi Gangadhareshwara) ಲಿಂಗವನ್ನು ಸ್ಪರ್ಶಿಸಿದವು. ಈ ವಿಸ್ಮಯವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು.

ಇದನ್ನೂ ಓದಿ: Sabarimala Makarjyoti: ಶಬರಿಮಲೆ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂಡಿದ ಮಕರಜ್ಯೋತಿ, ಕಣ್ತುಂಬಿಕೊಂಡ ಭಕ್ತಕೋಟಿ

ಸಂಜೆ 5.20ರಿಂದ 5.23ರ ಸಮಯದಲ್ಲಿ ಒಟ್ಟು 3 ನಿಮಿಷ 12 ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಬಳಿಕ ಮಂಗಳಾರತಿ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕರಿಂದ ಮಂತ್ರಘೋಷ, ಡೊಳ್ಳು, ನಗಾರಿ, ಗಂಟೆಗಳ ನಾದ ಮೊಳಗಿದ್ದು, ನೆರೆದಿರುವ ಸಹಸ್ರಾರು ಭಕ್ತರು ಎಲ್ಇಡಿ ಸ್ಕ್ರೀನ್‌ಗಳ ಮೂಲಕ ವಿಸ್ಮಯ ಕಣ್ತುಂಬಿಕೊಂಡರು.

ನಂದಿಯ ಪಾದದಿಂದ ಕೊಂಬಿನ ವರೆಗೆ

Gavi Gangadeshwara Temple

ಇಂದು(ಜ.15) ಸಂಜೆ 5.20ರ ಸುಮಾರಿಗೆ ಗವಿಗಂಗಾಧರೇಶ್ವರ ದೇಗುಲದ ಗರ್ಭಗೃಹದ ದ್ವಾರ ಪ್ರವೇಶಿಸಿದ ಸೂರ್ಯ ರಶ್ಮಿ, ಮೊದಲು ನಂದಿ ವಿಗ್ರಹದ ಪಾದವನ್ನು ಸ್ಪರ್ಶಿಸಿತು. ಬಳಿಕ ನಂದಿಯ ಬೆನ್ನಿನ ಭಾಗಕ್ಕೆ ಆಗಮಿಸಿತ್ತು. ಬಳಿಕ ನಂದಿಯ ಕೊಂಬಿನ ಮೂಲಕ ಹಾದುಹೋಗಿ ಈಶ್ವರ ಲಿಂಗವನ್ನು ಸ್ಪರ್ಶಿಸಿತು.

ಸೂರ್ಯನ ಕೌತುಕವನ್ನು ಕುಣ್ತುಂಬಿಕೊಂಡ ಭಕ್ತರು

Gavi Gangadeshwara

ಕಳೆದ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಭಕ್ತರು ಈ ವಿಸ್ಮಯವನ್ನು ನೋಡುವುದಕ್ಕೆ ಆಗಿರಲಿಲ್ಲ. ಆದ್ರೆ, ಈ ಬಾರಿ ಸೂರ್ಯ ರಶ್ಮಿ ಸ್ಪರ್ಶವನ್ನು ಕಣ್ತುಂಬಿಕೊಳ್ಳಲು ಭಕ್ತರು ಬೆಳಗ್ಗೆಯಿಂದಲೇ  ಗವಿಗಂಗಾಧರೇಶ್ವರ ದೇಗುಲ ಬಳಿ ಕಿಕ್ಕಿರಿದು ಸೇರಿದ್ದರು. ಇದರಿಂದ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರನ ಲಿಂಗವನ್ನು ಸ್ಪರ್ಶಿಸುವ ದೃಶ್ಯವನ್ನು ಭಕ್ತರಿಗೆ ಎಲ್ಇಡಿ ಸ್ಕ್ರೀನ್​ ಮೂಲಕ ತೋರಿಸಲಾಯ್ತು.

 3 ನಿಮಿಷ 12 ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಸ್ಪರ್ಶ

Gavi Gangadeshwara

ಇನ್ನು ಈ ಬಗ್ಗೆ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಡಾ.ಸೋಮಸುಂದರ್ ದೀಕ್ಷಿತ್ ಪ್ರತಿಕ್ರಿಯಿಸಿದ್ದು, ಸಂಜೆ 5.20ರಿಂದ 5.23ರ ಸಮಯದಲ್ಲಿ ಒಟ್ಟು 3 ನಿಮಿಷ 12 ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಕಳೆದ ವರ್ಷ ಸೂರ್ಯ ನಮಸ್ಕಾರ ಸಾಕಾರವಾಗಿರಲಿಲ್ಲ. ಆದ್ರೆ ಈ ವರ್ಷ ಪೂಜೆ ಸಾಕಾರಗೊಂಡಿದೆ. ನಾಲ್ಕು ವರ್ಷಗಳ ಕಾಲ 18 ಸೆಕೆಂಡ್‌ ಸೂರ್ಯರಶ್ಮಿ ಸ್ಪರ್ಶ ಮಾಡಿತ್ತು. ಈ ವರ್ಷ 3 ನಿಮಿಷ 12 ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಪ್ರಸಕ್ತ ವರ್ಷ ಯಾವುದೇ ಅನಾಹುತ ಹಾಗೂ ಅನಾನುಕೂಲವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Published On - 6:38 pm, Sun, 15 January 23

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್