ಮಂತ್ರಿಗಳೇನು ಸಿಎಂ ಗುಲಾಮರಾ?: ಪರಿಷತ್​ ಸದಸ್ಯ ಹೆಚ್​. ವಿಶ್ವನಾಥ್​ ಕಿಡಿ

Edited By:

Updated on: Oct 16, 2025 | 12:07 PM

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಧಾನ ಪರಿಷತ್​ ಸದಸ್ಯ ಹೆಚ್​. ವಿಶ್ವನಾಥ್​ ಕಿಡಿ ಕಾರಿದ್ದಾರೆ. ಯಾವುದೇ ಮಾನದಂಡವಿಲ್ಲದೆ ಮಹಿಳೆಯರಿಗೆ ಪ್ರತಿತಿಂಗಳು 2 ಸಾವಿರ ರೂಪಾಯಿ ಹಣ ನೀಡುತ್ತಿರೋದನ್ನ ಆಕ್ಷೇಪಿಸಿರುವ ಅವರು, ಮಂತ್ರಿಗಳೇನು ಸಿಎಂ ಸಿದ್ದರಾಮಯ್ಯ ಅವರ ಗುಲಾಮರಾಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಮೈಸೂರು, ಅಕ್ಟೋಬರ್​ 16: ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿ ಎಲ್ಲದಕ್ಕೂ ಮಾನದಂಡಗಳಿವೆ. ಹೀಗಿರುವಾಗ ಯಾವುದಾದರೂ ಹುಚ್ಚ ಮಹಿಳೆಯರಿಗೆ ಯಾವ ಮಾನದಂಡವಿಲ್ಲದೆ ಪ್ರತಿ ತಿಂಗಳು 2 ಸಾವಿರ ಹಣ ಕೊಡುತ್ತಾನಾ ಎಂದು ಪರಿಷತ್​ ಸದಸ್ಯ ಹೆಚ್​.ವಿಶ್ವನಾಥ್​ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿರುವ ಅವರು, ನಿನ್ನ ಹೆಂಡತಿಗೂ ಫ್ರೀ, ನನ್ನ ಹೆಂಡಿತಿಗೂ ಫ್ರೀ ಅಂತಾರೆ. ಇದು ಯಾರ ಅಪ್ಪನ ಮನೆ ದುಡ್ಡಲ್ಲ ಸಿದ್ದರಾಮಯ್ಯನವರೇ, ಜನರ ತೆರಿಗೆ ಹಣ. ಈ ಮಂತ್ರಿಗಳೆಲ್ಲ ಯಾಕೆ ಬಾಯಿಮುಚ್ಚಿ ಕುಳಿತಿದ್ದಾರೋ ಗೊತ್ತಿಲ್ಲ. ಮಂತ್ರಿಗಳೇನು ಸಿಎಂ ಗುಲಾಮರಾ ಎಂದು ವಿಶ್ವನಾಥ್​ ಕಿಡಿ ಕಾರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More