ವಿಜಯ ದೇವರಕೊಂಡ ತಮ್ಮ ನಾಯಿಯೊಂದಿಗೆ ಪ್ರಯಾಣಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಿದರೂ ಲಕ್ಷಾಂತರ ಜನ ನೋಡುತ್ತಾರೆ!!

ಜನರು ವಿಜಯ್ ಅವರ ನಾಯಿಯ ಬಗ್ಗೆಯೂ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಪೆಟ್ ತನ್ನ ಮಾಸ್ಟರ್ ನೀಡುವ ಪ್ರತಿಯೊಂದು ಆಜ್ಞೆಯನ್ನು ಅತ್ಯಂತ ವಿಧೇಯತೆಯಿಂದ ಪಾಲಿಸುತ್ತಿದೆ. ವಿಮಾನದಲ್ಲಿ ಜಂಟಲ್​ಮ್ಯಾನ್ ನಿಂದ ಪ್ರಭಾವಿತರಾಗಿರುವ ವ್ಯಕ್ತಿಯೊಬ್ಬರು ಅದರೊಂದಿಗೆ ಶೇಕ್ ಹ್ಯಾಂಡ್ ಮಾಡುತ್ತಾರೆ, ತಲೆ ನೇವರಿಸುತ್ತಾ ಮಾತಾಡಿಸುತ್ತಾರೆ.

TV9kannada Web Team

| Edited By: shivaprasad.hs

Jan 21, 2022 | 8:14 AM

ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ 31 ವರ್ಷ ವಯಸ್ಸಿನ ವಿಜಯ ದೇವರಕೊಂಡ (Vijay Devarkonda) ಈಗ ದೊಡ್ಡ ಹೆಸರು ಮಾರಾಯ್ರೇ. ಅವರು ನಟಿಸಿದ ಚಿತ್ರವೊಂದು ಫ್ಲಾಪ್ ಅದರೂ ನಿರ್ಮಾಪಕನನ್ನು ಲಾಭದಲ್ಲಿಟ್ಟಿರುತ್ತದೆ. ವಿಜಯ್​ಗೆ ಇನ್​ಸ್ಟಾಗ್ರಾಮ್ ಸುಮಾರು ಒಂದೂವರೆ ಕೋಟಿ ಫಾಲೋಯರ್ಸ್ (followers) ಇದ್ದಾರೆ ಎಂದರೆ ಅವರ ಎಷ್ಟು ಜನಪ್ರಿಯರು ಅನ್ನೋದನ್ನ ಅರ್ಥಮಾಡಿಕೊಳ್ಳಬಹುದು. ವಿಜಯ ತಮ್ಮ ನಾಯಿ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಒಂದು ಅಪ್ಯಾಯಮಾನವಾದ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಇತ್ತೀಚಿಗೆ ಪೋಸ್ಟ್ ಮಾಡಿದ್ದು ಅದಕ್ಕೆ 13 ಲಕ್ಷ ಲೈಕ್​ಗಳು ವ್ಯಕ್ತವಾಗಿವೆ ಮಾರಾಯ್ರೇ. ಸಾಮಾಜಿಕ ಜಾಲತಾಣಗಳಲ್ಲಿ (social media) ಈ ವಿಡಿಯೋ ಅಲೆಗಳನ್ನೇ ಸೃಷ್ಟಿಸಿದೆ. ತನ್ನ ಪೋಸ್ಟ್ ಗೆ ಅವರು ‘ಇದು ಈ ಸದ್ಗೃಹಸ್ಥನ (ಜಂಟಲ್​ಮ್ಯಾನ್, ನಾಯಿಯ ಹೆಸರು) ಮೊದಲ ವಿಮಾನಯಾನ ಆಗಿದೆ’ ಅಂತ ಶೀರ್ಷಿಕೆ ನೀಡಿದ್ದಾರೆ.

ಜನರು ವಿಜಯ್ ಅವರ ನಾಯಿಯ ಬಗ್ಗೆಯೂ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಪೆಟ್ ತನ್ನ ಮಾಸ್ಟರ್ ನೀಡುವ ಪ್ರತಿಯೊಂದು ಆಜ್ಞೆಯನ್ನು ಅತ್ಯಂತ ವಿಧೇಯತೆಯಿಂದ ಪಾಲಿಸುತ್ತಿದೆ. ವಿಮಾನದಲ್ಲಿ ಜಂಟಲ್​ಮ್ಯಾನ್ ನಿಂದ ಪ್ರಭಾವಿತರಾಗಿರುವ ವ್ಯಕ್ತಿಯೊಬ್ಬರು ಅದರೊಂದಿಗೆ ಶೇಕ್ ಹ್ಯಾಂಡ್ ಮಾಡುತ್ತಾರೆ, ತಲೆ ನೇವರಿಸುತ್ತಾ ಮಾತಾಡಿಸುತ್ತಾರೆ. ಪ್ರೀತಿಯ ಪೆಟ್ ಬಗ್ಗೆ ವಿಜಯ ಅತೀವ ಅಭಿಮಾನದಿಂದ ಏನನ್ನೋ ಹೇಳುತ್ತಿದ್ದಾರೆ.

ವಿಜಯ ದೇವರಕೊಂಡ ಕೆಲಸದ ಬಗ್ಗೆ ಮಾತಾಡುವುದಾದರೆ, ಬಹು-ನಿರೀಕ್ಷಿತ ಮತ್ತು ಭಾರಿ ಬಜೆಟ್ ಸಿನಿಮಾ ‘ಲೈಗರ್’ ಆಗಸ್ಟ್​​ನಲ್ಲಿ ತೆರೆಕಾಣಲಿದೆ. ಈ ಸಿನಿಮಾದ ವೈಶಿಷ್ಟ್ಯತೆ ಏನು ಗೊತ್ತಾ? ಮಾಜಿ ಹೆವಿವೇಟ್ ಬಾಕ್ಸರ್ ಮತ್ತು ವಿಶ್ವದ ಅತ್ಯಂತ ಜನಪ್ರಿಯ (ಕುಖ್ಯಾತರೂ ಹೌದು!) ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮೈಕ್ ಟೈಸನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ ಜೊತೆ ನಾಯಕಿಯಾಗಿ ಚಂಕಿ ಪಾಂಡೆ  ಮಗಳು ಅನನ್ಯ ಪಾಂಡೆ ನಟಿಸಿದ್ದಾರೆ.

ಹಿಂದಿಯ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಹಣ ಹೂಡಿರುವ ಲೈಗರ್ ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:  ವಿಜಯ್​ ದೇವರಕೊಂಡ ಜತೆ ಗೋವಾದಲ್ಲಿ ಹೊಸ ವರ್ಷ ಆಚರಿಸಿದ ರಶ್ಮಿಕಾ? ಇಲ್ಲಿದೆ ಫೋಟೋ ಸಾಕ್ಷಿ

ಇದನ್ನೂ ಓದಿ:   ಧೂಳೆಬ್ಬಿಸಿದ ‘ಲೈಗರ್​’ ಗ್ಲಿಂಪ್ಸ್​ ವಿಡಿಯೋ; ವಿಜಯ್​ ದೇವರಕೊಂಡಗೆ ಭಾರೀ ಮೆಚ್ಚುಗೆ

Follow us on

Click on your DTH Provider to Add TV9 Kannada