ಸ್ಪಂದನ ಅಕಾಲಿಕ ಸಾವು: ವಿಜಯರಾಘವೇಂದ್ರ ವಿವಾಹ ವಾರ್ಷಿಕೋತ್ಸವವನ್ನು ಬಹಳ ಗ್ರ್ಯಾಂಡ್ ಆಗಿ ಅಚರಿಸುವ ಯೋಜನೆ ಹಾಕಿಕೊಂಡಿದ್ದರು
ಮಕ್ಕಳನ್ನು ತಬ್ಬಲಿಯಾಗಿಸಿ ಪತಿಯನ್ನು ಯಾವತ್ತೂ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ದೂಡಿ, ಚಿನ್ನೇಗೌಡ ಮತ್ತು ಬಿಕೆ ಶಿವರಾಂ ಕುಟುಂಬಗಳನ್ನು ಶೋಕಸಾಗರದಲ್ಲಿ ಮುಳುಗಿಸಿ ಸ್ಪಂದನ ಇಹಲೋಕದ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಂಡು ಕಣ್ಮರೆಯಾಗಿದ್ದಾರೆ.
ಬೆಂಗಳೂರು: ಈಗಾಗಲೇ ವರದಿಯಾಗಿರುವಂತೆ ನಿನ್ನೆ (ಸೋಮವಾರ) ಬೆಳಗಿಮ ಜಾವ ಭಾರೀ ಹೃದಯಾಘಾತಕ್ಕೊಳಗಾಗಿ ಚಿಕ್ಕ ವಯಸ್ಸಿನಲ್ಲೇ ಮರಣವನ್ನಪ್ಪಿದ ಸ್ಪಂದನ ವಿಜಯರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರ ಮಂಗಳವಾರ ತಡರಾತ್ರಿ ಬೆಂಗಳೂರು ತಲುಪಲಿದೆ. ಚಿತ್ರ ನಿರ್ಮಾಪಕ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಕಿರಿಯ ಸಹೋದರ ಎಸ್ ಎ ಚಿನ್ನೇಗೌಡರ (SA Chinne Gowda) ಮಗ ವಿಜಯರಾಘವೇಂದ್ರರನ್ನು (Vijay Raghavendra) ಪ್ರೀತಿಸಿ ವರಿಸಿದ್ದ ಸ್ಪಂದನ ಆಗಸ್ಟ್ 26 ರಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದರು. ಕುಟುಂಬದ ಮೂಲಗಳ ಪ್ರಕಾರ ವಿಜಯ್ ವಾರ್ಷಿಕೋತ್ಸವದ ಬಗ್ಗೆ ಬಹಳ ಉತ್ಸುಕರಾಗಿದ್ದರು ಮತ್ತು ದಿನವನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸುವ ಪ್ಲ್ಯಾನ್ ಮಾಡಿದ್ದರು. ಆದರೆ ವಿಧಿ ಸ್ಪಂದನ ಮತ್ತು ವಿಜಯರಾಘವೇಂದ್ರ ಬದುಕಿನಲ್ಲಿ ಯಾರೂ ನೆನಸದಷ್ಟು ಕ್ರೂರ ಆಟವಾಡಿದೆ. ತನ್ನಿಬ್ಬರು ಮಕ್ಕಳನ್ನು ತಬ್ಬಲಿಯಾಗಿಸಿ ವಿಜಯರಾಘವೇಂದ್ರರನ್ನು ಯಾವತ್ತೂ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ದೂಡಿ, ಚಿನ್ನೇಗೌಡ ಮತ್ತು ಬಿಕೆ ಶಿವರಾಂ ಕುಟುಂಬಗಳನ್ನು ಶೋಕಸಾಗರದಲ್ಲಿ ಮುಳುಗಿಸಿ ಸ್ಪಂದನ ಇಹಲೋಕದ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಂಡು ಕಣ್ಮರೆಯಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ