ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ

Updated on: Oct 18, 2024 | 4:41 PM

ದರ್ಶನ್ ತೂಗುದೀಪ ಜೈಲು ಸೇರಿ ನಾಲ್ಕು ತಿಂಗಳಾಯ್ತು, ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿ 50 ದಿನಗಳಾಯ್ತು. ಈವರೆಗೆ ದರ್ಶನ್​ಗೆ ಜಾಮೀನು ದೊರಕಿಲ್ಲ. ಜಾಮೀನು ಅರ್ಜಿ ವಜಾ ಆದ ಬಳಿಕ ಮೊದಲ ಬಾರಿಗೆ ಪತ್ನಿ ಹಾಗೂ ಸಹೋದರ ದಿನಕರ್ ದರ್ಶನ್ ಕಾಣಲು ಬಂದಿದ್ದರು. ಈ ವೇಳೆ ಬೇಸರದಿಂದಲೇ ಬಂದರು ದರ್ಶನ್.

ದರ್ಶನ್ ಜೈಲು ಸೇರಿ ನಾಲ್ಕು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡು 50 ದಿನಗಳಾಗಿವೆ. ಆದರೆ ಈ ವರೆಗೆ ಜಾಮೀನು ಲಭಿಸಿಲ್ಲ. ಸಿಸಿಎಚ್ ನ್ಯಾಯಾಲಯ ದರ್ಶನ್ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದೆ. ಇದೀಗ ದರ್ಶನ್ ಹೈಕೋರ್ಟ್​ಗೆ ಅರ್ಜಿ ಹಾಕಿದ್ದಾರಾದರೂ ಅಲ್ಲಿಯೂ ಸಹ ಜಾಮೀನು ಸಿಗುವ ನಿರೀಕ್ಷೆ ಇಲ್ಲ. ಹೈಕೋರ್ಟ್​ನಲ್ಲಿ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಜಾಮೀನು ಅರ್ಜಿ ವಜಾ ಆದ ಬಳಿಕ ಮೊದಲ ಬಾರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೈಲಿಗೆ ಆಗಮಿಸಿದ್ದರು. ಈ ವೇಳೆ ತುಸು ಬೇಸರದಲ್ಲಿಯೇ ದರ್ಶನ್ ಆಗಮಿಸಿದರು. ಅವರು ಎರಡು ಚೀಲದಲ್ಲಿ ತಂದಿದ್ದ ಬಟ್ಟೆ, ಡ್ರೈಫ್ರೂಟ್ಸ್ ಇನ್ನಿತರೆಗಳನ್ನು ಎತ್ತಿಕೊಂಡು ತಮ್ಮ ಬ್ಯಾರಕ್​ಗೆ ಹೋದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More