ಗಾಂಧಿಗೆ ರಾಷ್ಟ್ರಪಿತ ಅನ್ನೋಕೆ ಅವರೇನು ದೇಶಕ್ಕೆ ಗಂಡನಾ ಅಂತ ಅಂಬೇಡ್ಕರ್ ಕೇಳಿದ್ದರು ಎಂದ ಯತ್ನಾಳ್
ಡಾ. ಬಿಆರ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರೂ ಎಂಬ ಕಾಂಗ್ರೆಸ್ ಮುಖಂಡ ಅಜ್ಜಂಪಿರ್ ಖಾದ್ರಿ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ, ನವೆಂಬರ್ 14: ಡಾ. ಬಿಆರ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರೂ ಎಂಬ ಕಾಂಗ್ರೆಸ್ ಮುಖಂಡ ಅಜ್ಜಂಪಿರ್ ಖಾದ್ರಿ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಜ್ಜಂಪಿರ್ ಖಾದ್ರಿ, ಡಾ. ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನ ಮಾಡಿಲ್ಲ. ಡಾ. ಬಿಆರ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಎಂದೂ ಬಯಸಿಲ್ಲ. ಡಾ. ಬಿಆರ್ ಅಂಬೇಡ್ಕರ್ ಅವರು ಹಿಂದೂ ವಿರೋಧಿಯಲ್ಲ ಎಂದು ಹೇಳಿದರು.
“ಖಾದ್ರಿಗೆ ಬುದ್ದಿ ಮತ್ತು ಮರ್ಯಾದೆ ಇಲ್ಲ”. ನಮ್ಮ ಜನ ಅಂಬೇಡ್ಕರ್ ಅವರ ವಿಚಾರಧಾರೆ ಓದಿಲ್ಲ. ಅದೇ ಈ ದೇಶದ ದುರ್ದೈವ. ನಮ್ಮ ಜನರು ಬರೀ ಗಾಂಧಿ ಬೆನ್ನು ಹತ್ತಿದ್ದಾರೆ. ಗಾಂಧಿಗಿಂತ ಶ್ರೇಷ್ಠ ಮನುಷ್ಯ ಅಂಬೇಡ್ಕರ್ ಅವರು. ಗಾಂಧಿಗೆ ಮಹಾತ್ಮ, ರಾಷ್ಟ್ರಪಿತ ಅನ್ನಬೇಡಿ ಅಂತ ಅಂಬೇಡ್ಕರ್ ಅವರು ಅವಾಗಲೇ ಹೇಳಿದ್ದರು. ರಾಷ್ಟ್ರಪಿತ ಹೇಗೆ ಆಗುತ್ತಾರೆ? ದೇಶಕ್ಕೆ ಗಂಡ ಇರ್ತಾನಾ? ಅಂತ ಅಂಬೇಡ್ಕರ್ ಅವರು ಹೇಳಿದ್ದರು ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೊಡ್ಡ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಹೇಳಿಕೆಗೆ ಪರಮೇಶ್ವರ್ ವಿಷಾದ

ಹಾಸನಕ್ಕೆ ನಾನ್ಯಾವತ್ತೂ ಕೃಷಿ ವಿಶ್ವವಿದ್ಯಾಲಯ ಕೇಳಿಲ್ಲ: ರೇವಣ್ಣ

ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್

ನನ್ನ ಸುದೀಪ್ ಮಧ್ಯೆ ಮನಸ್ತಾಪ ಆಗಿರಬಹುದು, ವೈರತ್ವ ಬೆಳೆದಿಲ್ಲ; ಶಿವಣ್ಣ
