ಬೆಂಗಳೂರು: ವಿದಾನ ಸಭೆ ಕಾರ್ಯಕಲಾಪ ಕೇವಲ ಆರೋಪ ಪ್ರತ್ಯಾಪರೋಗಳಿಗೆ ಸೀಮಿತಗೊಂಡಿರುವುದು ದುರದೃಷ್ಟಕರ. ಹೆಚ್ ಡಿ ಕುಮಾರಸ್ವಾಮಿ ಮತ್ತು ಕೆಜೆ ಜಾರ್ಜ್ ನಡುವೆ ವಾಕ್ಸಮರ ಕೊನೆಗೊಂಡ ಬಳಿಕ ಸಚಿವ ಎಂಬಿ ಪಾಟೀಲ್ (MB Patil) ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ನಡುವೆ ಜುಗಲ್ ಬಂದಿ ಶುರುವಾಯಿತು. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಅವರು ಮತ್ತು ಅವರ ಮಗ ಶಾಸಕ ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಹಲವಾರು ಬಾರಿ ಅರೋಪಗಳನ್ನು ಮಾಡಿದ್ದರು. ರೂ. 2,500 ಕೋಟಿ ಕೊಟ್ಟಿದ್ದರೆ ತಾವೂ ಮುಖ್ಯಮಂತ್ರಿಯಾಗಬಹುದಿತ್ತು ಎಂದು ಹೇಳಿದ್ದ ಯತ್ನಾಳ್ ಬಿಜೆಪಿ ಹೈಕಮಾಂಡನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದರು. ಸಚಿವ ಪಾಟೀಲ್ ಇಂದು ಸದನದಲ್ಲಿ ಯತ್ನಾಳ್ ಗೆ ಅವರಾಡಿದ ಮಾತುಗಳನ್ನು ಮತ್ತು ಮಾಡಿದ ಆರೋಪಗಳನ್ನು ನೆನಪಿಸಿದರು. ಪಾಟೀಲ್ ಗೆ ಬೆಂಬಲವಾಗಿ ನಿಂತ ಬೈರತಿ ಸುರೇಶ್ (Byrathi Suresh) ಎದ್ದು ನಿಂತು, ಬೀದೀಲಿ ನಿಂತು ಯಡಿಯೂರಪ್ಪರನ್ನು ಬೈದಾಡಿದಿರಲ್ಲ ಎನ್ನುತ್ತಾ ಯತ್ನಾಳ್ ರನ್ನು ಛೇಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ