ಟೆಂಪೋದಲ್ಲಿದ್ದ 13 ಜನ ಸ್ಪಾಟ್​ನಲ್ಲೇ ಸಾವಿಗೀಡಾಗಿದ್ದು ಕೇಳಿ ಇಡೀ ಗ್ರಾಮ ಆಘಾತಕ್ಕೊಳಗಾಗಿದೆ: ಎಮ್ಮೆಹಟ್ಟಿ ಗ್ರಾಮಸ್ಥರು

ಟಿವಿ9 ವರದಿಗಾರನೊಂದಿಗೆ ಮಾತಾಡಿರುವ ಮತ್ತೊಬ್ಬ ಹಿರಿಯ ವ್ಯಕ್ತಿ, ಟೆಂಪೋದಲ್ಲಿ 17 ಜನರಿದ್ದರು, 13 ಜನ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಮತ್ತು ಉಳಿದ ನಾಲ್ವರಲ್ಲಿ ಇಬ್ಬರು ಬದುಕುಳಿಯುವ ಸಾಧ್ಯತೆ ತೀರ ಕಡಿಮೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೇಯ ನಂತರ ದೇಹಗಳನ್ನು ಗ್ರಾಮಕ್ಕೆ ತರುತ್ತಾರೆ, ಅಂತಿಮ ಸಂಸ್ಕಾರದ ಸಿದ್ಧತೆಗಳನ್ನು ದೇಹಗಳು ಬಂದ ನಂತರ ಮಾಡುತ್ತೇವೆ ಎನ್ನುತ್ತಾರೆ.

ಟೆಂಪೋದಲ್ಲಿದ್ದ 13 ಜನ ಸ್ಪಾಟ್​ನಲ್ಲೇ ಸಾವಿಗೀಡಾಗಿದ್ದು ಕೇಳಿ ಇಡೀ ಗ್ರಾಮ ಆಘಾತಕ್ಕೊಳಗಾಗಿದೆ: ಎಮ್ಮೆಹಟ್ಟಿ ಗ್ರಾಮಸ್ಥರು
|

Updated on: Jun 28, 2024 | 11:50 AM

ಶಿವಮೊಗ್ಗ: ಇಂದು ಬೆಳಗಿನ ಜಾವ ಹಾವೇರಿ ಜಿಲ್ಲೆಯ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ಘೋರ ರಸ್ತೆ ಅಪಘಾತ ಚರ್ಚೆ ರಾಜ್ಯದೆಲ್ಲಡೆ ಆಗುತ್ತಿದೆ. ಅಪಘಾತದಲ್ಲಿ ಮೃತರು ಮತ್ತು ಗಂಭೀರವಾಗಿ ಗಾಯಗೊಂಡಿರುವರು ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ಗ್ರಾಮದವರು. ಗ್ರಾಮವನ್ನು ಸೂತಕ ಛಾಯ ಆವರಿಸಿದೆ ಮತ್ತು ಅಪಘಾತದ ಸುದ್ದಿಯನ್ನು ಬೆಳಗ್ಗೆ ಟಿವಿಗಳಲ್ಲಿ ನೋಡಿದ ಅವರು ದಿಗ್ಭ್ರಾಂತರಾಗಿದ್ದಾರೆ. ಟಿವಿ9 ಶಿವಮೊಗ್ಗ ಪ್ರತಿನಿಧಿ ಎಮ್ಮೆಹಟ್ಟಿ ಗ್ರಾಮಕ್ಕೆ ತೆರಳಿ ಅಲ್ಲಿನ ಜನರನ್ನು ಮಾತಾಡಿಸಿದ್ದಾರೆ. ಊರಿನ 13 ಜನರ ದುರ್ಮರಣಕ್ಕೆ ಅವರೆಲ್ಲ ದುಃಖಿಸತ್ತಿದ್ದಾರೆ. ನಮ್ಮ ವರದಿಗಾರನೊದಿಗೆ ಮಾತಾಡಿದ ಹಿರಿಯರೊಬ್ಬರು, ಅಪಘಾತದ ಸುದ್ದಿ ಕೇಳಿ ನಮಗೆಲ್ಲ ಆಘಾತವಾಗಿದೆ. ವಾಹನದಲ್ಲಿದ್ದವರು ಒಂದೇ ಕುಟುಂಬದವರು ಮತ್ತು ಅವರ ಸಂಬಂಧಿಕರು. ದೇವರ ದರ್ಶನಕ್ಕಾಗಿ ಹೋಗಿ ಬರುವಾಗ ಗುಂಡೇನಹಳ್ಳಿ ಕ್ರಾಸ್ ಬಳಿ ಅಪಘಾರ ಸಂಭವಿಸಿರುವ ಸುದ್ದಿಯನ್ನು ಬೆಳಗ್ಗೆ ಟಿವಿಯಲ್ಲಿ ನೋಡಿದೆವು, ಬಹಳ ದೊಡ್ಡ ದುರಂತವಿದು ಎಂದು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಸ್ತೆ ಅಪಘಾತ ಹೆಚ್ಚಳ: ಜೀವ ರಕ್ಷಣೆಗಾಗಿ ಮಹತ್ವದ ಹೆಜ್ಜೆ ಇಟ್ಟ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ

Follow us