ಬಿಗ್​ ಬಾಸ್​ ಮನೆಗೆ ವಿನಯ್​ ಪತ್ನಿ ಎಂಟ್ರಿ; ನೇರವಾಗಿ ಸಂಗೀತಾ ಜತೆ ಮಾತಿಗಿಳಿದ ಅಕ್ಷತಾ

|

Updated on: Dec 28, 2023 | 3:15 PM

ವಿನಯ್​ ಗೌಡ ಅವರ ಪತ್ನಿ ಅಕ್ಷತಾ ಈಗ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ದಾರೆ. ಮೊದಲು ವಿನಯ್​ ಜೊತೆ ಮಾತನಾಡಿ, ನಂತರ ಅವರು ಸಂಗೀತಾ ಶೃಂಗೇರಿ ಕಡೆ ಮುಖ ಮಾಡಿದ್ದಾರೆ. ‘ಸಂಗೀತಾ.. ನಿಮ್ಮ ಜೊತೆ ಮಾತಾಡಬೇಕು’ ಎಂದು ಅಕ್ಷತಾ ಹೇಳಿದ್ದಾರೆ. ಅವರಿಬ್ಬರು ಮಾತನಾಡುವಾಗ ವಿನಯ್​ ದೂರು ಕುಳಿತಿದ್ದಾರೆ.

ನಟ ವಿನಯ್​ ಗೌಡ ಅವರು ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಜೊತೆ ಆರಂಭದಲ್ಲಿ ವಿರೋಧ ಕಟ್ಟಿಕೊಂಡಿದ್ದರು. ಆದರೆ ಇತ್ತೀಚಿನ ವಾರಗಳಲ್ಲಿ ಅವರು ಸಾಫ್ಟ್​ ಆಗಿ ನಡೆದುಕೊಳ್ಳುತ್ತಿದ್ದಾರೆ. ಈಗ ದೊಡ್ಮನೆಗೆ ಸ್ಪರ್ಧಿಗಳ ಕುಟುಂಬದರು ಬಂದಿದ್ದಾರೆ. ವಿನಯ್​ ಗೌಡ ಅವರ ಪತ್ನಿ (Vinay Gowda Wife) ಅಕ್ಷತಾ ಕೂಡ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ದಾರೆ. ಮೊದಲು ವಿನಯ್​ ಜೊತೆ ಮಾತನಾಡಿ, ನಂತರ ಅವರು ಸಂಗೀತಾ ಶೃಂಗೇರಿ ಕಡೆ ಮುಖ ಮಾಡಿದ್ದಾರೆ. ‘ಸಂಗೀತಾ.. ನಿಮ್ಮ ಜೊತೆ ಮಾತಾಡಬೇಕು’ ಎಂದು ಅಕ್ಷತಾ ಹೇಳಿದ್ದಾರೆ. ಆ ಬಳಿಕ ಪ್ರತ್ಯೇಕವಾಗಿ ಅವರಿಬ್ಬರು ಮಾತುಕತೆ ನಡೆಸಿದ್ದಾರೆ. ಅವರಿಬ್ಬರು ಮಾತನಾಡುವಾಗ ವಿನಯ್​ ದೂರು ಕುಳಿತಿದ್ದಾರೆ. ಈ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಡಿಸೆಂಬರ್​ 28ರ ರಾತ್ರಿ 9.30ಕ್ಕೆ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ದಿನದ 24 ಗಂಟೆಯೂ ಲೈವ್​ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.