ಅರೆ ಇದೆಂತಹ ಅಚ್ಚರಿ; ಡೈರೆಕ್ಟರ್ ಆದ ರಾಜ್ ಕುಟುಂಬದ ಕುಡಿ ವಿನಯ್
ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾ ಯಾವುದು? ಏಕಾಏಕಿ ಅವರು ನಿರ್ದೇಶನಕ್ಕೆ ಇಳಿದಿದ್ದೇಕೆ ಎನ್ನುವ ಪ್ರಶ್ನೆ ನಿಮ್ಮದಾದರೆ ಅದಕ್ಕೆ ಉತ್ತರ ‘ಅಂದೊಂದಿತ್ತು ಕಾಲ’ ಸಿನಿಮಾ.
ರಾಜ್ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ಕುಮಾರ್ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊವಿಡ್ ಕಾರಣದಿಂದ ಶೂಟಿಂಗ್ ನಿಂತಿದ್ದವು. ಈಗ ಮತ್ತೆ ಚಿತ್ರೀಕರಣ ಆರಂಭವಾಗಿದೆ. ಅಚ್ಚರಿ ಎಂದರೆ ವಿನಯ್ ರಾಜ್ಕುಮಾರ್ ಈಗ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ! ಹಾಗಾದರೆ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾ ಯಾವುದು? ಏಕಾಏಕಿ ಅವರು ನಿರ್ದೇಶನಕ್ಕೆ ಇಳಿದಿದ್ದೇಕೆ ಎನ್ನುವ ಪ್ರಶ್ನೆ ನಿಮ್ಮದಾದರೆ ಅದಕ್ಕೆ ಉತ್ತರ ‘ಅಂದೊಂದಿತ್ತು ಕಾಲ’ ಸಿನಿಮಾ.
ಈ ಚಿತ್ರವನ್ನು ವಿನಯ್ ನಿರ್ದೇಶನ ಮಾಡುತ್ತಿಲ್ಲ. ಈ ಚಿತ್ರದಲ್ಲಿ ಅವರು ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಓರ್ವ ನಿರ್ದೇಶಕನ ಜೀವನವನ್ನು ಈ ಸಿನಿಮಾ ಹೇಳಲಿದೆ. ಈ ಸಿನಿಮಾ ಬಗ್ಗೆ ವಿನಯ್ ರಾಜ್ಕುಮಾರ್ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಈ ಸಿನಿಮಾ ಕೆಲಸಗಳು ನಿಂತಿದ್ದವು. ಈಗ ಮತ್ತೆ ಶೂಟಿಂಗ್ ಶುರುವಾಗಿದೆ. ಇದಲ್ಲದೆ, ‘ಗ್ರಾಮಾಯಣ’ ಚಿತ್ರದಲ್ಲೂ ವಿನಯ್ ನಟಿಸುತ್ತಿದ್ದು, ಈ ಸಿನಿಮಾ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಸೀಕ್ರೆಟ್ ಆಗಿ ನಡೆಯಿತು ಬಿಗ್ ಬಾಸ್ ಫಿನಾಲೆ; ಫೋಟೋದಿಂದ ಬಯಲಾಯ್ತು ವಿನ್ನರ್ ಹೆಸರು