ಜೈಲಿನೊಳಗೆ ದರ್ಶನ್ ಜೊತೆ ನಡೆದ ಮಾತುಕಥೆ ಬಗ್ಗೆ ವಿನೋದ್ ರಾಜ್ ಭಾವುಕ ಪ್ರತಿಕ್ರಿಯೆ
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಪರಿಸ್ಥಿತಿಯ ಬಗ್ಗೆ ವಿನೋದ್ ರಾಜ್ ವಿವರಿಸಿದ್ದಾರೆ. ‘ಜೈಲಿನಲ್ಲಿ ದರ್ಶನ್ ಕಳೆದಿರುವ 33 ದಿನ ತುಂಬ ಕಷ್ಟ. ಸ್ವಾತಂತ್ರ ಇಲ್ಲದೇ ಒಂದೇ ಜಾಗದಲ್ಲಿ ಕುಳಿತು, ಯೋಚನೆ ಮಾಡುತ್ತಾ ಅವರು ಎಷ್ಟು ಸೊರಗಿರಬಹುದು ಅಂತ ನನ್ನ ಮನಸ್ಸಿಗೆ ನೋವಾಗುತ್ತಿದೆ’ ಎಂದು ವಿನೋದ್ ರಾಜ್ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ವಿನೋದ್ ರಾಜ್ ಅವರು ಇಂದು (ಜುಲೈ 22) ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ‘ಟಿವಿ9 ಕನ್ನಡ’ ಜೊತೆ ಮಾತನಾಡಿದ ಅವರು ಭಾವುಕವಾಗಿ ಪ್ರತಿಕ್ರಿಯಿಸಿದರು. ‘ದರ್ಶನ್ ಅವರನ್ನು ಓರ್ವ ಕಲಾವಿದ ಎನ್ನುವ ಬದಲು ನಮ್ಮ ಕರುಳ ಸಂಬಂಧದವರು ಎನಿಸುತ್ತದೆ. ಅಷ್ಟು ಪ್ರೀತಿಯಿಂದ ಅಣ್ಣ ಅಂತ ಬಂದು ಅವರು ತಬ್ಬಿಕೊಂಡರು. ಆಗ ಪ್ರಾಣ ಕಳೆದುಕೊಂಡಂತೆ ಆಯ್ತು ನಮಗೆ. ಅಷ್ಟು ಪ್ರೀತಿಯನ್ನು ಹೇಗೆ ಹೇಳಬೇಕು ಅಂತ ತಿಳಿಯುತ್ತಿಲ್ಲ. ಆಪರೇಷನ್ಗೆ ಹೋಗುವುದಕ್ಕೂ ಮುನ್ನ ನಾನು ಅವರ ಬಳಿ ಫೋನ್ನಲ್ಲಿ ಮಾತನಾಡಿದ್ದೆ. ಆಪರೇಷನ್ ವಿಷಯವನ್ನು ಅವರಿಗೆ ಹೇಳಿರಲಿಲ್ಲ. ಆದರೆ ನನ್ನ ಧ್ವನಿಯಿಂದ ಅವರು ಕಂಡುಹಿಡಿದರು. ಯಾಕಣ್ಣ ಡಲ್ ಆಗಿದ್ದೀರಿ ಅಂತ ಕೇಳಿದರು. ಏನಿಲ್ಲ ಅಂತ ಅಷ್ಟೇ ಹೇಳಿದ್ದೆ. ನಾನು ಅಡ್ಮಿಟ್ ಆದ ಮರುದಿನ ಈ ಸುದ್ದಿ ಬಂತು’ ಎಂದು ವಿನೋದ್ ರಾಜ್ ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.