ಲೀಲಾವತಿ 11ನೇ ದಿನದ ಕಾರ್ಯದಲ್ಲಿ ತಾಯಿಯ ನೆನೆದು ಭಾವುಕರಾದ ವಿನೋದ್ ರಾಜ್
ನಟಿ ಲೀಲಾವತಿ ಅವರ ಅಗಲಿಕೆಯಿಂದ ಪುತ್ರ ವಿನೋದ್ ರಾಜ್ ತೀವ್ರ ನೋವು ಅನುಭವಿಸಿದ್ದಾರೆ. ತಾಯಿಯ 11ನೇ ದಿನದ ಕಾರ್ಯದಲ್ಲಿ ಅವರು ಭಾವುಕರಾಗಿ ಮಾತನಾಡಿದ್ದಾರೆ. ಅಮ್ಮನನ್ನು ನೆನಪು ಮಾಡಿಕೊಂಡು ಹಾಡು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ (Leelavathi) ಅವರು ನಿಧನರಾಗಿ 11 ದಿನ ಕಳೆದಿದೆ. 11ನೇ ದಿನದ ಕಾರ್ಯವನ್ನು ಪುತ್ರ ವಿನೋದ್ ರಾಜ್ ಮಾಡಿದ್ದಾರೆ. ಈ ಕಾರ್ಯದಲ್ಲಿ ಸ್ಯಾಂಡಲ್ವುಡ್ನ ಅನೇಕರು ಭಾಗಿ ಆಗಿದ್ದಾರೆ. ಲೀಲಾವತಿ ಅವರ ನೆನಪುಗಳನ್ನು ಮೆಲುಕು ಹಾಕಲಾಗಿದೆ. ಕಾರ್ಯ ಮುಗಿದ ಬಳಿಕ ‘ಟಿವಿ9 ಕನ್ನಡ’ದ ಜೊತೆ ಮಾತನಾಡಿದ ವಿನೋದ್ ರಾಜ್ (Vinod Raj) ಅವರು ಭಾವುಕರಾದರು. ‘ಇನ್ನೂ ಅನೇಕ ಸಾಮಾಜಿಕ ಕೆಲಸಗಳನ್ನು ನಾವು ಮಾಡಬೇಕಿದೆ. ಅಮ್ಮ ಒಂದಷ್ಟು ಕೆಲಸವನ್ನು ಸೂಚಿಸಿದ್ದಾರೆ’ ಎಂದು ವಿನೋದ್ ರಾಜ್ ಹೇಳಿದ್ದಾರೆ. ಅಮ್ಮನ ನೆನಪಿನಲ್ಲಿ ಅವರು ಹಾಡು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos