Loading video

ಆನೇಕಲ್: ವಕೀಲರ ಕಚೇರಿಯೊಳಗೆ ನುಗ್ಗಿದ ಹಾವು

| Updated By: ವಿವೇಕ ಬಿರಾದಾರ

Updated on: May 28, 2024 | 2:54 PM

ರಾಜ್ಯದ ಗಡಿಭಾಗ ತಮಿಳುನಾಡಿನ ಸೂಲಗಿರಿಯಲ್ಲಿರುವ ವಕೀಲರ ಕಚೇರಿಯೊಳಗೆ ಹಾವು ನುಗ್ಗಿದೆ. ಹಾವನ್ನು ಕಂಡು ಸಿಬ್ಬಂದಿ ಕಿರುಚಾಡುತ್ತಾ ಹೊರಗೆ ಓಡಿ ಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಆನೇಕಲ್ ಮೇ 28: ರಾಜ್ಯದ ಗಡಿಭಾಗ ತಮಿಳುನಾಡಿನ ಸೂಲಗಿರಿಯಲ್ಲಿರುವ ವಕೀಲರ ಕಚೇರಿಯೊಳಗೆ ಹಾವು ನುಗ್ಗಿದೆ. ಹಾವನ್ನು ಗಮನಿಸದ ಕಚೇರಿ ಸಿಬ್ಬಂದಿ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಕೆಲ ಸಮಯದ ಬಳಿಕ, ಹಾವು ಮಹಿಳಾ ಸಿಬ್ಬಂದಿ ಕಾಲಡಿ ಬಂದಿದೆ. ಆಗ, ಪಕ್ಕದಲ್ಲಿಯೇ ಇದ್ದ ಮತ್ತೋರ್ವ ಸಿಬ್ಬಂದಿ ಹಾವನ್ನು ನೋಡಿದ್ದಾರೆ. ಕೂಡಲೆ ಪಕ್ಕದಲ್ಲೇ ಇದ್ದ ಮಹಿಳಾ ಸಿಬ್ಬಂದಿಗೆ ನಿಮ್ಮ ಕಾಲಡಿ ಹಾವು ಇದೆ ಎಂದು ಹೇಳಿದ್ದಾರೆ. ಆಗ ಸಿಬ್ಬಂದಿ ಹಾವನ್ನು ಕಂಡು ಕಿರುಚಾಡುತ್ತಾ ಹೊರಗೆ ಓಡಿ ಹೋಗಿದ್ದಾರೆ. ನಂತರ ಉರಗ ತಜ್ಞರನ್ನು ಕರೆಸಿದ್ದಾರೆ. ಉರಗ ತಜ್ಞ ಹಾವನ್ನು ಹಿಡಿದಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ