ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯ ಅಮಲಾಪುರಂನಲ್ಲಿ ಕಪ್ಪು ನಾಗರ ಹಾವೊಂದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಅಮಲಾಪುರಂ ಗ್ರಾಮೀಣ ಮಂಡಲದ ಜಾನಿಪಲ್ಲಿಯಲ್ಲಿರುವ ಮರಿಸೆಟ್ಟಿ ನಾಗಭೂಷಣಂ ಎಂಬ ವ್ಯಕ್ತಿಯ ಮನೆಗೆ 6 ಅಡಿ ಎತ್ತರದ ನಾಗರ ಹಾವೊಂದು ಪ್ರವೇಶಿಸಿದೆ. ಅಲ್ಲಿನ ಕೋಳಿ ಗೂಡಿನಲ್ಲಿ 4 ಕೋಳಿಗಳನ್ನು ನುಂಗಿದ ನಂತರ ಅದು ಚಲನೆಯಿಲ್ಲದೆ ಬಿದ್ದುಕೊಂಡಿತ್ತು. ಭಯಭೀತರಾದ ಜನರು ತಕ್ಷಣವೇ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದರು. ವಿಷಯ ತಿಳಿದ ತಕ್ಷಣ, ಹಾವು ಹಿಡಿಯುವ ಗಣೇಶ್ ವರ್ಮಾ ಜಾಣತನದಿಂದ ನಾಗರ ಹಾವನ್ನು ಹಿಡಿದರು.
ಹೈದರಾಬಾದ್, ಜುಲೈ 23: ಆಂಧ್ರಪ್ರದೇಶದ (Andhra Pradesh) ಕೊನಸೀಮಾ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆ ಮನೆಗೆ ವಿಷಪೂರಿತ ಹಾವುಗಳು ಬಂದು ಸೇರುತ್ತಿವೆ. ಅಮಲಾಪುರಂ ಬಳಿಯ ಜನಪಲ್ಲಿ ಗ್ರಾಮದಲ್ಲಿ 6 ಅಡಿ ಉದ್ದದ ನಾಗರಹಾವು ಮಾರಿಸೆಟ್ಟಿ ನಾಗಭೂಷಣಂ ಅವರ ಮನೆಯ ಹಿತ್ತಲಿಗೆ ಬಂದಿತು. ಅವರ ಮನೆಯಲ್ಲೂ ಕೋಳಿಗಳನ್ನು ಸಾಕಿದ್ದರು. ಅವರ 4 ಕೋಳಿಗಳು ಕಾಣೆಯಾಗಿದ್ದವು. ಎಲ್ಲಿ ಹೋಯಿತೆಂದು ಹುಡುಕಿದಾಗ ಕೋಳಿಗಳನ್ನು ನುಂಗಿದ್ದ ಬೃಹತ್ ನಾಗರಹಾವು ಮುಂದೆ ತೆವಳಲೂ ಆಗದೆ ಬಿದ್ದುಕೊಂಡಿತ್ತು. ಅದನ್ನು ನೋಡಿ ಗಾಬರಿಯಾದ ಜನರು ಹಾವು ಹಿಡಿಯುವವರಿಗೆ ಮಾಹಿತಿ ನೀಡಿದರು.
ವಿಷಯ ತಿಳಿದ ತಕ್ಷಣ, ಹಾವು ಹಿಡಿಯುವ ಗಣೇಶ್ ವರ್ಮಾ ಜಾಣತನದಿಂದ ನಾಗರ ಹಾವನ್ನು ಹಿಡಿದರು. ಅದು ನುಂಗಿದ 4 ಕೋಳಿಗಳನ್ನು ವಾಂತಿ ಮಾಡಿತು. ನಂತರ ಅದನ್ನು ಪೆಟ್ಟಿಗೆಯಲ್ಲಿ ಬಂಧಿಸಲಾಯಿತು. ಅದನ್ನು ಸುರಕ್ಷಿತ ಪ್ರದೇಶದಲ್ಲಿ ಬಿಡಲಾಯಿತು. ಅಲ್ಲಿದ್ದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ